ಖಂಡ್ವಾ (ಮಧ್ಯಪ್ರದೇಶ): ನರ್ಮದಾ ನದಿಯಲ್ಲಿ ದೋಣಿ ಮಗುಚಿ 20 ಕ್ಕೂ ಹೆಚ್ಚು ಜನರು ನೀರು ಪಾಲಾಗಿರುವ ಘಟನೆ ಇಲ್ಲಿನ ಖಂಡ್ವಾ ವ್ಯಾಪ್ತಿಯಲ್ಲಿ ನಡೆದಿದೆ.
ಮಾಹಿತಿ ಪ್ರಕಾರ, ದೋಣಿಯಲ್ಲಿದ್ದವರೆಲ್ಲ ಮೆಹೋ ನಿವಾಸಿಗಳು ಎನ್ನಲಾಗ್ತಿದೆ. ನದಿಯ ಮೂಲಕ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಮತದ ಹಕ್ಕು ಚಲಾಯಿಸಲು ಹೋಗುತ್ತಿದ್ದರು ಎಂದು ತಿಳಿದು ಬಂದಿದೆ. ಘಟನೆ ಸಂಭವಿಸುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಇತರ ನಾವಿಕರು 7 ಜನರನ್ನು ರಕ್ಷಿಸಿ ಬಾರ್ವಾದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇತರರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ದೋಣಿಯಲ್ಲಿ ಎಷ್ಟು ಜನರಿದ್ದರು ಎಂಬ ನಿಖರ ಮಾಹಿತಿ ಇಲ್ಲ. ಅಂದಾಜು 20 ಜನರಿದ್ದರು ಎಂದು ಅಂದಾಜಿಸಲಾಗಿದೆ.