ಕಣ್ಣೂರು (ಕೇರಳ) :ಉತ್ತರ ಕೇರಳ ಜಿಲ್ಲೆಯ ಮುಜಪ್ಪಿಲಂಗಾಡ್‌ನ ಧರ್ಮಡೋಮ್‌ನಲ್ಲಿ ಶನಿವಾರ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ದೋಣಿಯೊಂದು ಅವಘಡಕ್ಕೆ ಸಿಲುಕಿದ ಘಟನೆ ಸಂಭವಿಸಿದೆ. ಸ್ಪರ್ಧೆಯ ದೋಣಿ ಅಚಾನಕ್ಕಾಗಿ ಮುಳುಗಿದ್ದು, ಅದರಲ್ಲಿದ್ದ 20 ಜನರನ್ನು ನೌಕಾಪಡೆಯ ಈಜುಗಾರರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
ಚಾಂಪಿಯನ್ಸ್ ಬೋಟ್ ಲೀಗ್-2023 ರೇಸ್ ಆಯೋಜಿಸಲಾಗಿತ್ತು. ಹಲವಾರು ದೋಣಿ ಮತ್ತು ಅದರ ಸ್ಪರ್ಧಾಳುಗಳು ಭಾವಹಿಸಿದ್ದರು. ಈ ವೇಳೆ ದೋಣಿಯೊಂದು ಸಮುದ್ರದಲ್ಲಿ ಮುಳುಗಡೆಯಾಗಿದೆ. ಅಲೆಗಳ ಹೊಡೆತಕ್ಕೆ ಸಿಲುಕಿ ಅದು ಮಗುಚಿತ್ತು. ದೋಣಿಯಲ್ಲಿ ಈಜು ಬಾರದ ಜನರೂ ಇದ್ದ ಕಾರಣ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣವೇ ಕಾರ್ಯಾಚರಣೆಗಿಳಿದ ನೌಕಾ ಪಡೆಯ ಈಜುಗಾರರು ಸಮುದ್ರಕ್ಕೆ ದುಮುಕಿ ಎಲ್ಲರನ್ನೂ ಸುರಕ್ಷಿತವಾಗಿ ದಡ ತಲುಪುವಂತೆ ಮಾಡಿದ್ದಾರೆ.
ಓಟದ ಸ್ಪರ್ಧೆಯ ವೇಳೆ ಜನರಿದ್ದ ದೋಣಿಗಳಲ್ಲಿ ಒಂದು ಪ್ರವಾಹಕ್ಕೆ ಸಿಲುಕಿ ನೀರಿನಲ್ಲಿ ಮುಳುಗಿತು. ದಕ್ಷಿಣ ನೌಕಾ ಕಮಾಂಡ್‌ನ ಭಾರತೀಯ ನೌಕಾಪಡೆಯ ಈಜುಗಾರರ ತಂಡವು ಸುರಕ್ಷತೆ ಮತ್ತು ಭದ್ರತಾ ಕ್ರಮಗಳ ಮೇಲ್ವಿಚಾರಣೆಗೆ ನಿಯೋಜಿಸಲಾಗಿತ್ತು. ಅವಘಡ ಸಂಭವಿಸಿದೆ ತಕ್ಷಣವ ಕಾರ್ಯಾಚರಣೆ ನಡೆಸಲಾಯಿತು ಎಂದು ನೌಕಾಪಡೆ ತಿಳಿಸಿದೆ.
ಲೈಫ್ ಜಾಕೆಟ್ಗಳನ್ನು ದೋಣಿ ಮುಳುಗಿದತ್ತ ಎಸೆದು ಅಪಾಯದಲ್ಲಿದ್ದ ಜನರನ್ನು ರಕ್ಷಿಸಿದ ಚಿತ್ರಗಳನ್ನು ನೌಕಾಪಡೆ ಎಕ್ಸ್ನಲ್ಲಿ (ಹಿಂದಿನ ಟ್ವಿಟರ್) ಹಂಚಿಕೊಂಡಿದೆ. ಇದರಲ್ಲಿ ಕೆಲವರು ಬಾಲಕರು ಕೂಡ ಇದ್ದರು ಎಂದು ತಿಳಿದು ಬಂದಿದೆ.