ಗುವಾಹಟಿ(ಅಸ್ಸೋಂ):ಇಲ್ಲಿನ ಬ್ರಹ್ಮಪುತ್ರ ನದಿಯಲ್ಲಿ ದೋಣಿ ದುರಂತ ಸಂಭವಿಸಿದೆ. ಸುಮಾರು 30 ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಮುಳುಗಿ 7 ಮಂದಿ ನಾಪತ್ತೆಯಾಗಿರುವ ದುರ್ಘಟನೆ ನಡೆದಿದೆ. ದೋಣಿಯಲ್ಲಿ ಸರ್ಕಲ್ ಆಫೀಸರ್ ಕೂಡ ಪ್ರಯಾಣಿಸುತ್ತಿದ್ದು, ಅವರೂ ಕಣ್ಮರೆಯಾಗಿದ್ದಾರೆ.
ದೋಣಿ ಮುಳುಗಲು ಅಧಿಕ ಭಾರ ಅಥವಾ ಇನ್ನೇನು ಕಾರಣ ಎಂಬುದು ತಿಳಿದುಬಂದಿಲ್ಲ. ದೋಣಿ ಮುಳುಗಿದ ತಕ್ಷಣ ಕೆಲವರು ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ವಿಷಯ ತಿಳಿದ ತಕ್ಷಣ ಎಸ್ಡಿಎಆರ್ಆರ್ಎಫ್ ಮತ್ತು ಬಿಎಸ್ಎಫ್ ತಂಡಗಳು ಶೋಧ ಕಾರ್ಯಾಚರಣೆಗಿಳಿದು ಕೆಲವರನ್ನು ರಕ್ಷಿಸಿವೆ.