ಅಮರಾವತಿ: ಆಂಧ್ರಪ್ರದೇಶ ಸರ್ಕಾರವು ತಿರುಮಲ ತಿರುಪತಿ ದೇವಸ್ಥಾನಕ್ಕೆ 81 ಸದಸ್ಯರ ಮಂಡಳಿಯನ್ನು ರಚಿಸಿದೆ. 24 ಸಾಮಾನ್ಯ ಸದಸ್ಯರನ್ನು ಒಳಗೊಂಡಂತೆ ನಾಲ್ಕು ಪದನಿಮಿತ್ತ ಸದಸ್ಯರೊಂದಿಗೆ 52 ವಿಶೇಷ ಆಹ್ವಾನಿತರನ್ನು ನಾಮನಿರ್ದೇಶನ ಮಾಡಿದೆ.
ಟಿಟಿಡಿಯ "ಸಾಮಾಜಿಕ, ಆರ್ಥಿಕ, ಧಾರ್ಮಿಕ ಮತ್ತು ಪರಿಸರೀಯ ಗುಣ ಕಾಪಾಡಲು" ಹಾಗೆ ಭಕ್ತರ ಕಲ್ಯಾಣ ತತ್ವಗಳನ್ನು ಪಾಲಿಸಲು ಜಂಬೂ ಮಂಡಳಿಯನ್ನೂ ರಚಿಸಲಾಗಿದೆ ಎಂದು ಸರ್ಕಾರ ತಿಳಿಸಿದ್ದು, ಈ ಸಂಬಂಧ ಸುಮಾರು ಮೂರು ಪ್ರತ್ಯೇಕ ಆದೇಶಗಳನ್ನು ಹೊರಡಿಸಿದೆ.
ಮಂಡಳಿಗೆ 50 ವಿಶೇಷ ಆಹ್ವಾನಿತರ ನೇಮಕವನ್ನು ಸಮರ್ಥಿಸಿದ ಸರ್ಕಾರ, ಅಭಿವೃದ್ಧಿ ಕಾರ್ಯಗಳು, ಇಂಜಿನಿಯರಿಂಗ್, ಹಣಕಾಸು ಮತ್ತು ಲೆಕ್ಕಪತ್ರ ನಿರ್ವಹಣೆ, ಮಾರುಕಟ್ಟೆ, ಮಾಧ್ಯಮ ಮತ್ತು ಪ್ರಕಟಣೆ, ಅರಣ್ಯ, ನೀರು ಸರಬರಾಜು ಮತ್ತು ಮಾನವ ಸಂಪನ್ಮೂಲ ನಿರ್ವಹಣೆ ಕ್ಷೇತ್ರಗಳಲ್ಲಿ ಈ ಮಂಡಳಿ ಕೆಲಸ ಮಾಡಲಿದೆ ಎಂದು ತಿಳಿಸಲಾಗಿದೆ.
ಈ ಚಟುವಟಿಕೆಗಳ ಪ್ರಮಾಣ ಮತ್ತು ವ್ಯಾಪ್ತಿಯ ಉದ್ದೇಶದಿಂದ ವಿವಿಧ ಕ್ಷೇತ್ರಗಳಲ್ಲಿ ಪರಿಣಿತರಾದ ವಿಶೇಷ ಆಹ್ವಾನಿತರನ್ನು ಸೇರಿಸಿಕೊಳ್ಳಲಾಗಿದೆ. ಮೇಲಾಗಿ, ರಾಜ್ಯವನ್ನು ರಾಷ್ಟ್ರೀಯ ಮತ್ತು ಜಾಗತಿಕವಾಗಿ ಆದ್ಯತೆಯ ಪ್ರವಾಸೋದ್ಯಮ ತಾಣವನ್ನಾಗಿ ರೂಪಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಕಂದಾಯ - ದತ್ತಿ ಪ್ರಧಾನ ಕಾರ್ಯದರ್ಶಿ ಜಿ - ವಾಣಿ ಮೋಹನ್ ಹೊರಡಿಸಿದ ಆದೇಶದಲ್ಲಿ ಉಲ್ಲೇಖಿಲಾಗಿದೆ.