ಮುಂಬೈ (ಮಹಾರಾಷ್ಟ್ರ): ಮುಂಬೈನ ಬಿಕೆಸಿ ಜಂಬೋ ವ್ಯಾಕ್ಸಿನೇಷನ್ ಕೇಂದ್ರದ ಹೊರಗೆ 'ವ್ಯಾಕ್ಸಿನ್ ಔಟ್ ಆಫ್ ಸ್ಟಾಕ್' ಎಂಬ ಫಲಕಗಳನ್ನು ಹಾಕಿದ್ದು, ಲಸಿಕೆ ಪಡೆಯಲು ಬಂದ ಜನರು ಹಾಗೆಯೇ ವಾಪಸ್ಸಾಗುತ್ತಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಕೆಸಿ ಜಂಬೋ ಲಸಿಕಾ ಕೇಂದ್ರದ ಡೀನ್ ರಾಜೇಶ್ ದೇರೆ, ನಾವು ಕೋವಿಶೀಲ್ಡ್ ಲಸಿಕೆಯ 350-400 ಡೋಸ್ಗಳನ್ನು ಪಡೆದಿದ್ದೆವು, ಅದನ್ನು ನೀಡಿದ್ದೇವೆ. ಲಸಿಕೆ ಖಾಲಿಯಾಗಿರುವುದು ನಿನ್ನೆ ರಾತ್ರಿ ನಮ್ಮ ಗಮನಕ್ಕೆ ಬಂದಿದೆ. ಇಂದು ಸಂಜೆಯೊಳಗೆ ಲಸಿಕೆ ತಲುಪಲಿದೆ ಎಂದು ಮಾಹಿತಿಯನ್ನು ನಾವು ಸ್ವೀಕರಿಸಿದ್ದೇವೆ. ಹೀಗಾದಲ್ಲಿ ನಾವು ನಾಳೆ ವ್ಯಾಕ್ಸಿನೇಷನ್ ಪ್ರಾರಂಭಿಸುತ್ತೇವೆ ಎಂದು ಹೇಳಿದ್ದಾರೆ.