ಕರ್ನಾಟಕ

karnataka

ETV Bharat / bharat

ಬಿಎಂಐ ರೋಗಿಗಳ ಭಾಗಶಃ ಮೊಣಕಾಲು ಆರ್ತ್ರೋಪ್ಲ್ಯಾಸ್ಟಿಯ ದೀರ್ಘಾವಧಿ ಫಲಿತಾಂಶಗಳ ಮೇಲೆ ಪರಿಣಾಮ:ವರದಿ - ಆಫ್ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ

ಬಿಎಂಐ ರೋಗಿಗಳ ಭಾಗಶಃ ಮೊಣಕಾಲು ಬದಲಾವಣೆಯ ದೀರ್ಘಾವಧಿಯ ಫಲಿತಾಂಶಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಇತ್ತೀಚಿನ ಅಧ್ಯಯನದಿಂದ ಸಂಶೋಧಕರು ಕಂಡುಹಿಡಿದಿದ್ದಾರೆ.

Body Mass Index
ದಿ ಜರ್ನಲ್ ಆಫ್ ಬೋನ್ ಮತ್ತು ಜಾಯಿಂಟ್ ಸರ್ಜರಿ

By

Published : Mar 9, 2023, 7:11 PM IST

ವಾಷಿಂಗ್ಟನ್ (ಅಮೆರಿಕ):ಯೂನಿಕಾಂಪಾರ್ಟ್ಮೆಂಟಲ್ ಅಥವಾ "ಪಾರ್ಶಿಯಲ್" ನೀ ರಿಪ್ಲೇಸ್ಮೆಂಟ್(ಯುಕೆಆರ್​) ಮಾಡಿಸಿಕೊಳ್ಳುವ ಬಹುತೇಕ ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ) ಹೊಂದಿರುವ ರೋಗಿಗಳಿಗೆ ಸಿಮೆಂಟಿನ ವಿಧಾನಕ್ಕಿಂತಲೂ ಸಿಮೆಂಟ್ ರಹಿತವಾದದನ್ನು ಬಳಸಿಕೊಂಡು ಒಳಗಡೆ ಅಳವಡಿಸಿದಾಗ ದೀರ್ಘಾವಧಿಯ ಫಲಿತಾಂಶಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ದಿ ಜರ್ನಲ್ ಆಫ್ ಬೋನ್ ಮತ್ತು ಜಾಯಿಂಟ್ ಸರ್ಜರಿಯಲ್ಲಿ ಪ್ರಕಟವಾದ ಅಧ್ಯಯನದಿಂದ ತಿಳಿದಿದೆ.

ಏನು ಹೇಳುತ್ತದೆ ಹೊಸ ಸಂಶೋಧನೆ?:ಹೊಸ ಸಂಶೋಧನೆ ಪ್ರಕಾರ, ಈ ಹೆಚ್ಚಿನ ಬಿಎಂಐ ರೋಗಿಗಳಲ್ಲಿ, ಸಿಮೆಂಟ್ ಯುಕೆಆರ್‌ಗೆ ಹೋಲಿಸಿದರೆ, ಸಿಮೆಂಟ್‌ ರಹಿತವಾದ 10 ವರ್ಷದ ಪರಿಷ್ಕರಣೆ ಶಸ್ತ್ರಚಿಕಿತ್ಸೆಯ ದರಗಳು ಕಡಿಮೆಯಾಗಿವೆ. ಜನಸಂಖ್ಯೆಯಲ್ಲಿ ಬಿಎಂಐ ಹೆಚ್ಚಾದಂತೆ, ಯುಕೆಆರ್​ ಫಲಿತಾಂಶಗಳ ಮೇಲೆ ಏನು ಪರಿಣಾಮ ಬೀರುತ್ತದೆ ಎಂದು ಆಫ್ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಪ್ರಮುಖ ಲೇಖಕ ಡಾ.ಹಸನ್ ಆರ್. ಮೊಹಮ್ಮದ್ ವಿವರಿಸಿದ್ದು ಹೀಗೆ.

ಯುಕೆಆರ್‌ನಲ್ಲಿ, ಮೊಣಕಾಲಿನ ಮೂರು ವಿಭಾಗಗಳಲ್ಲಿ ಒಂದನ್ನು ಮಧ್ಯದ ವಿಭಾಗದ ಅಂದರೆ, ಪ್ರಾಸ್ಥೆಸಿಸ್‌ನಿಂದ ಬದಲಾಯಿಸಲಾಗುತ್ತದೆ. ಯುಕೆಆರ್​ ತಂತ್ರವು ಸಾಮಾನ್ಯ ಮೊಣಕಾಲು ಅಂಗರಚನಾಶಾಸ್ತ್ರವನ್ನು ಸಂರಕ್ಷಿಸುವ ಕಾರಣ, ಇದು ಹೆಚ್ಚು ಸಾಮಾನ್ಯವಾದ ಒಟ್ಟು ಮೊಣಕಾಲು ಬದಲಿಗಿಂತ ಕೆಲವು ಪ್ರಯೋಜನಗಳನ್ನು ಹೊಂದಿದೆ. ಆದರೂ ಯುಕೆಆರ್​ ಒಳಗಾಗುವ ರೋಗಿಗಳು ಹೆಚ್ಚಿನ ಪುನರಾವರ್ತಿತ ಅಥವಾ ಪರಿಷ್ಕರಣೆ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾರೆ.

ಸಿಮೆಂಟ್ ಅಥವಾ ಸಿಮೆಂಟ್ ರಹಿತ ತಂತ್ರಗಳು: "ಮೂಳೆ ಶಸ್ತ್ರಚಿಕಿತ್ಸಕರಿಗೆ ಇದು ಸವಾಲಿನ ಕಾರ್ಯವಾಗಿದೆ. ಯುಕೆಆರ್‌ನ ಫಲಿತಾಂಶಗಳ ಮೇಲೆ ಬಿಎಂಐ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ದತ್ತಾಂಶಗಳನ್ನು ಗಮನಿಸಬಹುದಾಗಿದೆ. ಇದನ್ನು ಸಿಮೆಂಟ್ ಅಥವಾ ಸಿಮೆಂಟ್ ರಹಿತ ತಂತ್ರಗಳನ್ನು ಬಳಸಿ ನಿರ್ವಹಿಸಬಹುದು. ಈ ಹೊಸ ಅಧ್ಯಯನವು ಯುಕೆಆರ್​ ತಂತ್ರಗಳೆರಡರ ದೀರ್ಘಾವಧಿಯ ಫಲಿತಾಂಶಗಳ ಮೇಲೆ ಬಿಎಂಐ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನಿರ್ಣಯಿಸಲಾಗಿದೆ ಎಂದು ಈ ಬಗ್ಗೆ ಅಧ್ಯಯನ ನಡೆಸಿರುವ ಸಂಶೋಧಕರು ಹೇಳಿದ್ದಾರೆ.

ಅಧ್ಯಯನವು, 2004ರಿಂದ 2018ರವರೆಗೆ ಯುಕೆಆರ್‌ಗೆ ಒಳಪಡುವ 5,220 ರೋಗಿಗಳ ಎರಡು ಗುಂಪುಗಳಿಗೆ ಹೋಲಿಸಿ ಸಂಶೋಧನೆ ಮಾಡಲಾಗಿದೆ. ಒಂದು ಗುಂಪಿನ ರೋಗಿಗಳಲ್ಲಿ ಸಿಮೆಂಟ್‌ ರಹಿತ ತಂತ್ರವನ್ನು ಮತ್ತು ಇನ್ನೊಂದು ಗುಂಪಿನಲ್ಲಿ ಸಿಮೆಂಟೆಡ್ ತಂತ್ರವನ್ನು ಬಳಸಿಕೊಂಡು ಯುನಿಕಾಪಾರ್ಟ್ಮೆಂಟಲ್ ಇಂಪ್ಲಾಂಟ್‌ಗಳನ್ನು ಅಳವಡಿಸಲಾಯಿತು. ಎಲ್ಲಾ ಕಾರ್ಯವಿಧಾನಗಳನ್ನು ಒಂದೇ ರೀತಿಯ ಇಂಪ್ಲಾಂಟ್‌ನ (ಆಕ್ಸ್‌ಫರ್ಡ್ ಮೊಬೈಲ್ ಬೇರಿಂಗ್ ಯುಕೆಆರ್) ಸಿಮೆಂಟೆಡ್ ಅಥವಾ ಸಿಮೆಂಟ್ ರಹಿತ ಆವೃತ್ತಿಗಳನ್ನು ಬಳಸಿ ನಡೆಸಲಾಯಿತು.

ಬಿಎಂಐ ಗುಂಪುಗಳಾಗಿ ವರ್ಗೀಕರಣ:ದೇಹದ ತೂಕ ಮತ್ತು ಎತ್ತರದ ಆಧಾರದ ಮೇಲೆ ರೋಗಿಗಳನ್ನು ಮೂರು ಬಿಎಂಐ ಗುಂಪುಗಳಾಗಿ ವರ್ಗೀಕರಿಸಲಾಗಿದೆ. 18.5 ರಿಂದ 25 kg/m2, 25ರಿಂದ 30 kg/m2, ಮತ್ತು 30 kg/m2 ಅಥವಾ ಹೆಚ್ಚಿನದು ಎಂದು ವಿಂಗಡಿಸಲಾಗಿದೆ. ಬಿಎಂಐ ಗುಂಪುಗಳಾದ್ಯಂತ ಸಿಮೆಂಟ್ ಮತ್ತು ಸಿಮೆಂಟ್ ರಹಿತ ಯುಕೆಆರ್​ಗೆ ಹತ್ತು ವರ್ಷದ ಅನುಸರಣಾ ಫಲಿತಾಂಶಗಳನ್ನು ಹೋಲಿಸಲಾಗಿದೆ. ಅಧ್ಯಯನವು ಪರಿಷ್ಕರಣೆ ಶಸ್ತ್ರಚಿಕಿತ್ಸೆಯ ದರವನ್ನು ಕೇಂದ್ರೀಕರಿಸಿದೆ. ಯುಕೆಆರ್ ನಂತರದ ಪರಿಣಾಮಕಾರಿ ಮೊಣಕಾಲಿನ ಹೆಚ್ಚುವರಿ ಶಸ್ತ್ರಚಿಕಿತ್ಸೆಯಾಗಿದೆ ಎಂದು ವ್ಯಾಖ್ಯಾನಿಸಲಾಗಿದೆ.

ಇಂಪ್ಲಾಂಟ್ ಬದುಕುಳಿಯುವಿಕೆಯ ಪ್ರಮಾಣ:ಒಟ್ಟಾರೆ 10 ವರ್ಷಗಳ ಇಂಪ್ಲಾಂಟ್ ಬದುಕುಳಿಯುವಿಕೆಯ ಪ್ರಮಾಣವು ಸಿಮೆಂಟೆಡ್‌ಗೆ ಶೇ.90.1 ಮತ್ತು ಸಿಮೆಂಟ್ ರಹಿತ ಯುಕೆಆರ್‌ಗೆ ಶೇ 92.8 ಆಗಿತ್ತು. ಸಿಮೆಂಟೆಡ್ ಯುಕೆಆರ್‌ಗೆ ಒಳಗಾಗುವ ರೋಗಿಗಳಿಗೆ, ಪರಿಷ್ಕರಣೆ ದರವು ಬಿಎಂಐಗಿಂತ ಹೆಚ್ಚಿದೆ. ಬಿಎಂಐ 25ರಿಂದ 30 ಗುಂಪಿನಲ್ಲಿ 1.15 ಮತ್ತು ಬಿಎಂಐ 30 ಅಥವಾ ಹೆಚ್ಚಿನ ಗುಂಪಿನಲ್ಲಿ 1.31ಕ್ಕೆ ಹೋಲಿಸಿದರೆ, 18.5 ರಿಂದ 25 ಬಿಎಂಐ ಹೊಂದಿರುವ ರೋಗಿಗಳಲ್ಲಿ ಪರಿಷ್ಕರಣೆಗಳ ದರವು ಶೇ 0.92 ಆಗಿತ್ತು.

ಹೆಚ್ಚಿನ ಬಿಎಂಐ ಹೊಂದಿರುವ ರೋಗಿಗಳಲ್ಲಿ ಸಿಮೆಂಟ್ ರಹಿತ ಸ್ಥಿರೀಕರಣವು ಯೋಗ್ಯವಾಗಿರಬಹುದು. ಸಿಮೆಂಟ್ ರಹಿತ ಯುಕೆಆರ್‌ಗೆ ಇದನ್ನು ಗಮನಿಸಲಾಗಿಲ್ಲ ಎಂದು ಡಾ.ಮೊಹಮ್ಮದ್ ಮತ್ತು ಸಹೋದ್ಯೋಗಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಇಂದು ವಿಶ್ವ ಕಿಡ್ನಿ ದಿನ: ಮೂತ್ರಪಿಂಡದ ಸಮಸ್ಯೆ ನಿರ್ಲಕ್ಷ್ಯ ಜೀವನಕ್ಕೆ ಆಗಲಿದೆ ದುಬಾರಿ

ABOUT THE AUTHOR

...view details