ಕರ್ನಾಟಕ

karnataka

ETV Bharat / bharat

‘ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆ’: ಮೀಡಿಯಾ ಹೌಸ್​ ಐಟಿ ರೈಡ್ ವಿರುದ್ಧ ಕಾಂಗ್ರೆಸ್ ಕಿಡಿ - ತೆರಿಗೆ ವಂಚನೆ ಆರೋಪ

ದೇಶದ ಹಲವು ಮೀಡಿಯಾ ಹೌಸ್​​ಗಳ ಮೇಲೆ ನಡೆದ ಐಟಿ ದಾಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಆಕ್ರೋಶ ಹೊರಹಾಕಿದೆ. ಇದು ಪ್ರಜಾಪ್ರಭುತ್ವದ ಅಡಿಪಾಯ ವಿರೂಪಗೊಳಿಸುವ ವಿಲಕ್ಷಣ ಮಾದರಿ ಎಂದು ಬಿಜೆಪಿ ವಿರುದ್ಧ ಆರೋಪಿಸಿದೆ.

Abhishek manu singvi
ಕಾಂಗ್ರೆಸ್​​​ ನಾಯಕ ಅಭಿಷೇಕ್ ಮನು ಸಿಂಘ್ವಿ

By

Published : Jul 23, 2021, 11:35 AM IST

ನವದೆಹಲಿ: ನಿನ್ನೆ ಎರಡು ಪ್ರಮುಖ ಮೀಡಿಯಾ ಹೌಸ್​​ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ ಸಂಬಂಧ ಕಾಂಗ್ರೆಸ್ ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದೆ. ಇದೊಂದು ಪ್ರಜಾಪ್ರಭುತ್ವದ ಮೇಲಿನ ಕಪ್ಪುಚುಕ್ಕೆ ಎಂದು ಜರಿದಿದೆ.

ಐಟಿ ಇಲಾಖೆ ‘ದೈನಿಕ್ ಭಾಸ್ಕರ್ ಗ್ರೂಪ್’ ಹಾಗೂ ‘ಭಾರತ್ ಸಮಾಚಾರ್’ ಎರಡು ಕಚೇರಿಗಳ ಮೇಲೆ ಹಣಕಾಸು ವಹಿವಾಟು ಮತ್ತು ತೆರಿಗೆ ವಂಚನೆ ಆರೋಪದ ಮೇಲೆ ದಾಳಿ ನಡೆಸಿತ್ತು. ಈ ಕುರಿತು ಪ್ರತಿಕ್ರಿಯಿಸಿದ್ದ ಹಿರಿಯ ಕಾಂಗ್ರೆಸ್​​​ ನಾಯಕ ಅಭಿಷೇಕ್ ಮನು ಸಿಂಘ್ವಿ, ದೈನಿಕ್ ಭಾಸ್ಕರ್ ಮೇಲಿನ ಐಟಿ ದಾಳಿಯೂ ಬಿಜೆಪಿ ಸರ್ಕಾರದ ಧಮನ ನೀತಿ, ಅಪಾಯಕಾರಿ ನೀತಿ ಮತ್ತು ಕಠಿಣ ಸ್ವರೂಪ ಎತ್ತಿ ತೋರಿಸುತ್ತದೆ. ಈ ಕೃತ್ಯಕ್ಕೆ ನಾನೇನು ಹೇಳಲು ಸಾಧ್ಯ, ಇದೊಂದು ನಿರಂಕುಶ ಪ್ರಭುತ್ವ, ದಬ್ಬಾಳಿಕೆ, ಸರ್ವಾಧಿಕಾರ, ಫ್ಯಾಸಿಸಂ, ನಿರಂಕುಶಾಧಿಕಾರಿ ಮತ್ತು ನಿರಂಕುಶಪ್ರಭುತ್ವ ಇನ್ನೂ ಹೇಳಲು ಬಹಳಷ್ಟಿದೆ ಎಂದಿದ್ದಾರೆ.

ಇದಲ್ಲದೇ ಕೋವಿಡ್ ಕುರಿತ ನಿರಂತರ ವರದಿ ಪ್ರಕಟಿಸಿದ್ದ ಹಿನ್ನೆಲೆ ದೈನಿಕ್ ಭಾಸ್ಕರ್ ಮಾಧ್ಯಮ ಸಂಸ್ಥೆ ಮೇಲೆ ಐಟಿ ದಾಳಿ ನಡೆಲಾಗಿದೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಭೋಪಾಲ್​ನಲ್ಲಿ ಆಕ್ಸಿಜನ್​​ನಿಂದ ಸಾವು ಸಂಭವಿಸಿಲ್ಲ ಎಂದು ಸಂಸತ್ತಿಗೆ ಕೇಂದ್ರ ನೀಡಿದ್ದ ಪ್ರತಿಕ್ರಿಯೆಗೆ ವಿರುದ್ಧವಾಗಿ ಸುದ್ದಿ ಪ್ರಕಟಿಸಿದ್ದ ಭೋಪಾಲ್ ಆವೃತ್ತಿಯನ್ನ ಸಿಂಘ್ವಿ ಉಲ್ಲೇಖಿಸಿದರು.

ಇದು ಪ್ರಜಾಪ್ರಭುತ್ವದ ಅಡಿಪಾಯ ವಿರೂಪಗೊಳಿಸುವ ವಿಲಕ್ಷಣ ಮಾದರಿಯಾಗಿದೆ. ಇದನ್ನು ನಾವು ಖಂಡಿಸುತ್ತೇವೆ. ಎಲ್ಲ ನಾಗರೀಕ ಸಮಾಜ ಇದನ್ನು ಖಂಡಿಸಲಿದೆ ಎಂದಿದ್ದಾರೆ.

ABOUT THE AUTHOR

...view details