ಕರ್ನಾಟಕ

karnataka

By

Published : Jan 24, 2021, 11:28 AM IST

ETV Bharat / bharat

ಪಾಲಕ್ಕಾಡ್ ಜಿಲ್ಲೆಯ ಸ್ಮಶಾನದಲ್ಲಿ ಜಾತಿ ತಾರತಮ್ಯ ಆರೋಪ

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಕೆಲ ಸ್ಥಳೀಯರು ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯೋರ್ವರ ಶವವನ್ನು ಸ್ಮಶಾನದಲ್ಲಿ ಹೂಳದಂತೆ ತಡೆದಿರುವ ಘಟನೆ ಬೆಳಕಿಗೆ ಬಂದಿದೆ.

ಕೇರಳದ ಪಾಲಕ್ಕಾಡ್ ಜಿಲ್ಲೆಯ ಸಶ್ಮಾನದಲ್ಲಿ ಜಾತಿ ತಾರತಮ್ಯ ಆರೋಪ
Blatant Caste Discrimination At A Public Cemetery In Attappadi, Palakkad

ಪಾಲಕ್ಕಾಡ್ (ಕೇರಳ): ಜಾತಿ ತಾರತಮ್ಯ ನಮ್ಮಲ್ಲಿ ಇನ್ನು ಉಳಿದಿದೆ ಎನ್ನುವುದಕ್ಕೆ ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ನಡೆದಿರುವ ಈ ಘಟನೆ ಉತ್ತಮ ಸಾಕ್ಷಿಯಾಗಿದೆ.

ಪಾಲಕ್ಕಾಡ್ ಜಿಲ್ಲೆಯ ಅತ್ತಪ್ಪಾಡಿಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯೋರ್ವರು ಸಾವನ್ನಪ್ಪಿದ್ದರು. ಇವರ ಕುಟುಂಬಸ್ಥರು ಅಂತ್ಯಸಂಸ್ಕಾರ ನೆರವೇರಿಸಿ ಶವವನ್ನು ಹೂಳಲೆಂದು ಅಲಮಾರ ಸಾರ್ವಜನಿಕ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಈ ವೇಳೆ ಅಲ್ಲಿನ ಸ್ಥಳೀಯ ಗುಂಪು ಇಲ್ಲಿ ಶವವನ್ನು ಹೂಳದಂತೆ ತಡೆದು ಸ್ಮಶಾನಕ್ಕೆ ಬೀಗ ಹಾಕಿ ವಿಕೃತಿ ಮೆರೆದಿದೆ.

ಬಳಿಕ ಕುಟುಂಬಸ್ಥರು ಪೊರಂಬೋಕ್ ರುದ್ರಭೂಮಿಯಲ್ಲಿ ಮಹಿಳೆಯ ಶವ ಸಂಸ್ಕಾರ ನೆರವೇರಿಸಿದರು. ಈ ಸಂಬಂಧ ಉಮ್ಮತಂಪಾಡಿ ಕಾಲೋನಿ ನಿವಾಸಿಗಳು ಶವ ಹೂಳಲು ವಿರೋಧ ವ್ಯಕ್ತಪಡಿಸಿದವರ ವಿರುದ್ಧ ಜಾತಿ ತಾರತಮ್ಯ ಮಾಡಿದ್ದಾರೆಂದು ಆರೋಪಿಸಿ ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದು ಸಾರ್ವಜನಿಕ ಸ್ಮಶಾನವಲ್ಲ. ಶಿವಮುಖಿ ಸ್ಮಶಾನ ಸಂಘದಿಂದ ದೇಣಿಗೆ ಸಂಗ್ರಹಿಸಿ ರುದ್ರಭೂಮಿಯನ್ನು ಖರೀದಿಸಲಾಗಿದೆ. ಈ ಕುರಿತಂತೆ ತಮ್ಮ ಬಳಿ ದಾಖಲೆಗಳಿವೆ ಎಂದು ವಿರೋಧ ವ್ಯಕ್ತಪಡಿಸಿದ ಗುಂಪು ವಾದಿಸಿದೆ.

ABOUT THE AUTHOR

...view details