ಕುಪ್ವಾರ(ಜಮ್ಮು ಕಾಶ್ಮೀರ): ಭಯೋತ್ಪಾದಕ ದಾಳಿಗಳ ನಡುವೆ ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಹಂದ್ವಾರದ ಜಚಲ್‌ದಾರಾ ಪ್ರದೇಶದ ಸೇನಾ ಶಿಬಿರದ ಹೊರಗೆ ಭಾನುವಾರ ಸ್ಫೋಟದ ರೀತಿಯ ಶಬ್ದ ಕೇಳಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೆಲವು ಹಳೆಯ ಶೆಲ್ಗಳು ಸ್ಫೋಟಗೊಂಡಿವೆ ಎಂದು ಪ್ರಾಥಮಿಕ ವರದಿಗಳು ಸ್ಪಷ್ಟಪಡಿಸಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಮ್ಮು ಕಾಶ್ಮೀರದ ಆರ್ಮಿ ಕ್ಯಾಂಪ್ ಬಳಿ ನಿಗೂಢ ಸ್ಫೋಟ - ಕುಪ್ವಾರದಲ್ಲಿ ನಿಗೂಢವಾದ ಸ್ಫೋಟ
ಕುಪ್ವಾರ ಜಿಲ್ಲೆಯ ಜಚಲ್‌ದಾರಾ ಪ್ರದೇಶದಲ್ಲಿರುವ ಸೇನಾ ಶಿಬಿರದ ಹೊರಗೆ ಸ್ಫೋಟದ ಶಬ್ದ ಕೇಳಿಸಿದ್ದು, ಹಳೆಯ ಶೆಲ್ಗಳು ಸ್ಫೋಟಗೊಂಡಿವೆ ಎಂದು ಪ್ರಾಥಮಿಕ ಮೂಲಗಳು ಮಾಹಿತಿ ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು ಕಾಶ್ಮೀರದ ಆರ್ಮಿ ಕ್ಯಾಂಪ್ ಬಳಿ ನಿಗೂಢ ಸ್ಫೋಟ
ಸ್ಫೋಟದಲ್ಲಿ ಯಾವುದೇ ಪ್ರಾಣಾಪಾಯದ ವರದಿಯಾಗಿಲ್ಲ. ವಿವರವಾದ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈಗ ಸದ್ಯಕ್ಕೆ ಸ್ಥಳದಲ್ಲಿ ಹೆಚ್ಚುವರಿ ಸೇನೆಯನ್ನು ನಿಯೋಜನೆ ಮಾಡಲಾಗಿದೆ, ಬಿಗಿ ಭದ್ರತೆ ಒದಗಿಸಲಾಗಿದೆ ಎಂಬ ಮಾಹಿತಿ ದೊರೆತಿದೆ.