ಜಮ್ಮು ಮತ್ತು ಕಾಶ್ಮೀರ:ಮಂಗಳವಾರ ಸಂಜೆ ಜಮ್ಮುವಿನ ಸುಧ್ರಾ ಸೇತುವೆ ಚೆಕ್ ಪಾಯಿಂಟ್ ಬಳಿ ಅನುಮಾನಾಸ್ಪದ ಸ್ಫೋಟ ಆಗಿರುವ ಬಗ್ಗೆ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸ್ ತಂಡ ತನಿಖೆ ನಡೆಸುತ್ತಿದೆ. ಮಂಗಳವಾರ ಸಂಜೆ ಸುಧ್ರಾ ಸೇತುವೆ ಚೆಕ್‌ಪಾಯಿಂಟ್‌ನಲ್ಲಿ ಸ್ಫೋಟದ ರೀತಿಯ ಶಬ್ದ ಕೇಳಿಬಂದ ನಂತರ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸುತ್ತಿವೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.
ಸುಧ್ರಾ ಸೇತುವೆ ಬಳಿ ಸ್ಫೋಟದ ರೀತಿ ಶಬ್ದ.. ಭದ್ರತಾ ಪಡೆಗಳು ಅಲರ್ಟ್ - ETV Bharath Karnataka
ಜಮ್ಮುವಿನ ಸುಧ್ರಾ ಸೇತುವೆ ಚೆಕ್ ಪಾಯಿಂಟ್ ಬಳಿ ಸ್ಫೋಟ ಸಂಭವಿಸಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
Etv Bharatಜಮ್ಮುವಿನ ಸುಧ್ರಾ ಸೇತುವೆ ಚೆಕ್ ಪಾಯಿಂಟ್ ಬಳಿ ಸ್ಫೋಟ: ಭದ್ರತೆ ಹೆಚ್ಚಿಸಿದ ಪೊಲೀಸರು
ಅಪಘಾತದ ಸಮಯದಲ್ಲಿ ಸೇತುವೆಯ ಮೇಲೆ ಯಾವುದೇ ಚಲನೆ ಇರಲಿಲ್ಲ. ಹೀಗಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆ ಸಬ್ದ ಕೇಳಿಬಂದ ಸ್ಥಳದಲ್ಲಿ ಕುಳಿ ಉಂಟಾಗಿದೆ. ತನಿಖೆಗೆ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಚಂದನ್ ಕೊಹ್ಲಿ ಮಾಹಿತಿ ನೀಡಿದ್ದಾರೆ.