ಕರ್ನಾಟಕ

karnataka

ETV Bharat / bharat

ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ: ಸುಟ್ಟು ಕರಕಲಾದ 6 ಕಾರ್ಮಿಕರು - ಪಟಾಕಿ ಕಾರ್ಖಾನೆಯಲ್ಲಿ ಸ್ಪೋಟಕ್ಕೆ 6 ಜನ ಬಲಿ

ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಪಟಾಕಿ ಕಾರ್ಖಾನೆಯೊಂದರಲ್ಲಿ ಸ್ಫೋಟ ಸಂಭವಿಸಿ 6 ಜನರು ಮೃತಪಟ್ಟು, 15 ಜನರು ಗಾಯಗೊಂಡ ಭೀಕರ ಘಟನೆ ನಡೆದಿದೆ.

cracker-factory
ಸ್ಪೋಟ ಸಂಭವಿಸಿ

By

Published : Feb 22, 2022, 1:28 PM IST

Updated : Feb 22, 2022, 1:38 PM IST

ಉನಾ:ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಪಟಾಕಿ ಕಾರ್ಖಾನೆಯೊಂದರಲ್ಲಿ ಸ್ಫೋಟ ಸಂಭವಿಸಿ 6 ಕಾರ್ಮಿಕರು ಸುಟ್ಟು ಕರಕಲಾದರೆ, 15 ಮಂದಿ ಗಾಯಗೊಂಡ ಭೀಕರ ಘಟನೆ ನಡೆದಿದೆ.

ಹರೋಲಿಯ ತಹ್ಲಿವಾಲ್‌ನಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ ಈ ದುರಂತ ಸಂಭವಿಸಿದೆ. ಕಾರ್ಖಾನೆಯಲ್ಲಿ ಭಾರಿ ಶಬ್ದದೊಂದಿಗೆ ಸ್ಫೋಟ ಸಂಭವಿಸಿದೆ. ಈ ವೇಳೆ ಪಟಾಕಿ ತುಂಬಿದ್ದ ಇಡೀ ಕಾರ್ಖಾನೆಗೆ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದವರಲ್ಲಿ 6 ಜನರು ಸ್ಥಳದಲ್ಲೇ ಬೆಂಕಿಯ ಕೆನ್ನಾಲಿಗೆಗೆ ಸಿಕ್ಕು ಸುಟ್ಟು ಕರಕಲಾಗಿದ್ದಾರೆ.


ಘಟನೆಯಲ್ಲಿ 10 ರಿಂದ 15 ಕ್ಕೂ ಅಧಿಕ ಜನರು ತೀವ್ರ ಸುಟ್ಟ ಗಾಯಗಳೊಂದಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟಕ್ಕೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿ:ಚಾಮರಾಜನಗರ: ರಸ್ತೆಯ ಮೇಲೆ ಚಿರತೆ ಮೃತದೇಹ ಪತ್ತೆ, ವಾಹನ ಡಿಕ್ಕಿ ಶಂಕೆ

Last Updated : Feb 22, 2022, 1:38 PM IST

ABOUT THE AUTHOR

...view details