ಕರ್ನಾಟಕ

karnataka

ETV Bharat / bharat

ಮನೆಯಲ್ಲಿ ನಿಗೂಢ ಸ್ಫೋಟ: ದಂಪತಿ ಸೇರಿ ಮಗು ಸಾವು, ಇನ್ನಿಬ್ಬರು ಮಕ್ಕಳ ಸ್ಥಿತಿ ಗಂಭೀರ - Cylinder blast

ಮನೆಯೊಂದರಲ್ಲಿ ಸಂಭವಿಸಿದ ನಿಗೂಢ ಸ್ಫೋಟಕ್ಕೆ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ ಮಧ್ಯಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ.

blast-in-a-house-3-killed-on-spot-3-injured
ಮನೆಯಲ್ಲಿ ನಿಗೂಢ ಸ್ಫೋಟ

By

Published : Nov 4, 2020, 12:46 PM IST

ಮೊರೆನಾ (ಮಧ್ಯಪ್ರದೇಶ): ಇಲ್ಲಿನ ಜಿಗಾನಿ ಪ್ರದೇಶದ ಮನೆಯೊಂದರಲ್ಲಿ ಇಂದು ಬೆಳಗ್ಗೆ ಸಂಭವಿಸಿದ ನಿಗೂಢ ಸ್ಫೋಟದಲ್ಲಿ ದಂಪತಿ ಹಾಗೂ ಅವರ ಮೂರು ವರ್ಷದ ಮಗು ಮೃತಪಟ್ಟಿರುವ ಘಟನೆ ನಡೆದಿದೆ. ಅಲ್ಲದೆ ಇನ್ನಿಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಗೊಂಡಿದ್ದ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸ್ಫೋಟಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳೀಯರ ಪ್ರಕಾರ ಮೃತಪಟ್ಟ ಬಂಟಿ ಖಾನ್​ ತನ್ನ ಮನೆಯಲ್ಲಿ ಪಟಾಕಿ ಮಾರಾಟ ನಡೆಸುತ್ತಿದ್ದ, ಇದರಿಂದ ಸ್ಫೋಟ ಸಂಭವಿಸಿದೆ ಎನ್ನಲಾಗ್ತಿದೆ.

ಇನ್ನೊಂದೆಡೆ ಮನೆಯಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡಿದೆ ಎನ್ನಲಾಗುತ್ತಿದೆ. ಪೊಲೀಸರು ಸ್ಫೋಟಕ್ಕೆ ನಿಖರ ಕಾರಣ ಪತ್ತೆಹಚ್ಚುವಲ್ಲಿ ನಿರತರಾಗಿದ್ದಾರೆ.

ABOUT THE AUTHOR

...view details