ನವದೆಹಲಿ :ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆ ವಿರೋಧಿಸಿ ಇಂದು ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಇದಕ್ಕೆ ಒಂದಿಷ್ಟು ಸಂಘಟನೆಗಳು ಸಾಥ್ ನೀಡಿದ್ರೆ, ಇನ್ನೊಂದಿಷ್ಟು ವಿರೋಧಿಸಿವೆ. ಬಿಕೆಯು ಭಾನು ಸಂಘಟನೆ ಅಧ್ಯಕ್ಷ ಭಾನು ಪ್ರತಾಪ್ ಸಿಂಗ್ ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಅವರ ಭಾರತ್ ಬಂದ್ ಕರೆಯನ್ನ ತಾಲಿಬಾನ್ ಚಟುವಟಿಕೆಗಳಿಗೆ ಹೋಲಿಕೆ ಮಾಡಿರುವ ಭಾನು ಪ್ರತಾಪ್, ರಾಕೇಶ್ ಟಿಕಾಯತ್ ಅವರು ತಮ್ಮನ್ನು ರೈತ ಮುಖಂಡ ಎಂದು ಕರೆದುಕೊಳ್ಳುತ್ತಿದ್ದಾರೆ. ಆದರೆ, ಭಾರತ್ ಬಂದ್ನಿಂದ ದೇಶದ ಆರ್ಥಿಕತೆ ಹಾಗೂ ರೈತರಿಗೆ ತೊಂದರೆ ಆಗುತ್ತಿರುವ ಬಗ್ಗೆ ಅವರಿಗೆ ಗೊತ್ತಿಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.
ದೇಶದ ಆರ್ಥಿಕತೆ ಹಾಗೂ ರೈತರ ಮೇಲೆ ಇದರಿಂದ ಪರಿಣಾಮ ಬೀರುತ್ತದೆ. ಆದರೆ, ಟಿಕಾಯತ್ ಭಾರತ್ ಬಂದ್ಗೆ ಕರೆ ನೀಡಿದ್ದಾರೆ. ಈ ರೀತಿಯ ನಿರ್ಧಾರ ಕೈಗೊಳ್ಳುವ ಮೂಲಕ ಅವರು ತಾಲಿಬಾನ್ ನಡೆ ಅನುಸರಣೆ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿರಿ:ಆನ್‌ಲೈನ್ ರಮ್ಮಿ ಆಟವನ್ನು ನಿಷೇಧಿಸುವುದು ಅಸಂವಿಧಾನಿಕ : ಕೇರಳ ಹೈಕೋರ್ಟ್