ಕರ್ನಾಟಕ

karnataka

ETV Bharat / bharat

ದಿಲ್ಲಿಯ ಪಾಕ್ ಹಿಂದೂ ನಿರಾಶ್ರಿತರ ಜತೆ ದೀಪಾವಳಿ ಆಚರಿಸಿದ ತೇಜಸ್ವಿ ಸೂರ್ಯ: ವಿದ್ಯುತ್ ಸಂಪರ್ಕ ಕೋರಿ ಕೇಜ್ರಿವಾಲ್​ಗೆ ಪತ್ರ

ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ, ದೀಪಾವಳಿಯ ಸಂದರ್ಭದಲ್ಲಿ ಆದರ್ಶ್ ನಗರ ಶಿಬಿರದಲ್ಲಿ ಇರುವ ಹಿಂದೂ ಕುಟುಂಬಸ್ಥರನ್ನು ಭೇಟಿ ಮಾಡಿ, ಸಿಎಂ ಕೇಜ್ರಿವಾಲ್‌ಗೆ ಪತ್ರ ಬರೆದು, ಈ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಒದಗಿಸುವಂತೆ ಕೋರಿದ್ದಾರೆ.

ತೇಜಸ್ವಿ ಸೂರ್ಯ
Tejashwi Surya

By

Published : Nov 14, 2020, 8:45 PM IST

Updated : Nov 15, 2020, 6:11 AM IST

ನವದೆಹಲಿ: ಪಾಕಿಸ್ತಾನದಿಂದ ಬಂದು ರಾಷ್ಟ್ರ ರಾಜಧಾನಿಯ ಶಿಬಿರದಲ್ಲಿ ವಾಸಿಸುತ್ತಿರುವ ಹಿಂದೂ ನಿರಾಶ್ರಿತರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಬಿಜೆಪಿಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ಗೆ ಮನವಿ ಮಾಡಿದ್ದಾರೆ.

ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ, ದೀಪಾವಳಿಯ ಸಂದರ್ಭದಲ್ಲಿ ಆದರ್ಶ್ ನಗರ ಶಿಬಿರದಲ್ಲಿ ಇರುವ ಹಿಂದೂ ಕುಟುಂಬಸ್ಥರನ್ನು ಭೇಟಿ ಮಾಡಿ, ಸಿಎಂ ಕೇಜ್ರಿವಾಲ್‌ಗೆ ಪತ್ರ ಬರೆದು, ಈ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಒದಗಿಸುವಂತೆ ಕೋರಿದ್ದಾರೆ.

ತಮ್ಮ ರಾಜ್ಯದ ಜನರು ಕತ್ತಲೆಯಲ್ಲಿ ವಾಸಿಸುತ್ತಿದ್ದರೆ ದೀಪಾವಳಿ ಆಚರಿಸಲು ಮುಖ್ಯಮಂತ್ರಿಗೆ ಯಾವುದೇ ಹಕ್ಕಿಲ್ಲ ಎಂದು ಹೇಳಿದರು.

30 ದಿನಗಳಲ್ಲಿ ಅವರಿಗೆ ವಿದ್ಯುತ್ ಸಂಪರ್ಕ ಒದಗಿಸಬೇಕು. ಬೇಡಿಕೆ ಈಡೇರದಿದ್ದರೆ ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ಹೋರಾಟ ಪ್ರಾರಂಭಿಸುತ್ತದೆ ಎಂದರು.

Last Updated : Nov 15, 2020, 6:11 AM IST

ABOUT THE AUTHOR

...view details