ಕರ್ನಾಟಕ

karnataka

ಪತಿ ಕಸ ಗುಡಿಸುವ ಬ್ಲಾಕ್‌ನ ಅಧ್ಯಕ್ಷೆಯಾದ ಬಿಜೆಪಿಯ ಸೋನಿಯಾ: ಯುಪಿಯಲ್ಲಿ ಅಪರೂಪದ ಸಮಾಗಮ

ಪಂಚಾಯಿತಿಯಲ್ಲಿ ಪತಿ ಸಹಾಯಕ, ಪತ್ನಿ ಅದೇ ಪಂಚಾಯಿತಿಯ ಸದಸ್ಯೆ ಅಥವಾ ಅಧ್ಯಕ್ಷೆ ಹುದ್ದೆಗೆೇರುವುದನ್ನು ನೋಡಿದ್ದೇವೆ. ಉತ್ತರ ಪ್ರದೇಶದಲ್ಲೂ ಇಂತಹದ್ದೇ ಘಟನೆ ನಡೆದಿದೆ. ಪತಿ ಸುನೀಲ್‌ ಕಸ ಗುಡಿಸುವ ಕೆಲಸ ಮಾಡುವ ಬ್ಲಾಕ್‌ನಲ್ಲೇ ಬಿಜೆಪಿ ಸದಸ್ಯೆ ಸೋನಿಯಾ ಅಧ್ಯಕ್ಷೆ ಹುದ್ದೆಗೇರಿ ಎಲ್ಲರನ್ನೂ ಹುಬ್ಬೇರಿಸಿದ್ದಾರೆ.

By

Published : Jul 15, 2021, 10:45 PM IST

Published : Jul 15, 2021, 10:45 PM IST

Updated : Jul 16, 2021, 7:20 AM IST

BJP's Sonia becomes chief of UP block where husband works as sweeper
ಪತಿ ಕಸಗೂಡಿಸುವ ಕಚೇರಿಯಲ್ಲೇ ಪತ್ನಿ ಅಧ್ಯಕ್ಷೆ; ಯುಪಿಯಲ್ಲಿ ಅಪರೂದ ಸಮಾಗಮ..

ಲಖನೌ: ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಬ್ಲಾಕ್‌ ಡೆವಲಪ್‌ಮೆಂಟ್‌ ಕೌನ್ಸಿಲ್‌(ಬಿಡಿಸಿ) ಚುನಾವಣೆಯಲ್ಲಿ ಗೆದ್ದ ಮಹಿಳಾ ಸದಸ್ಯೆಯೊರ್ವರು ಆಕೆಯ ಪತಿ ಕಸ ಗುಡಿಸುವ ಕೆಲಸ ಮಾಡುತ್ತಿರುವ ಬ್ಲಾಕ್‌ನಲ್ಲೇ ಅಧ್ಯಕ್ಷಗಾದಿ ಪಡೆದಿದ್ದಾರೆ.

ಪತಿ ಕಸಗೂಡಿಸುವ ಕಚೇರಿಯಲ್ಲೇ ಪತ್ನಿ ಅಧ್ಯಕ್ಷೆ; ಯುಪಿಯಲ್ಲಿ ಅಪರೂದ ಸಮಾಗಮ..

ಸುನೀಲ್ ಕುಮಾರ್ ಬ್ಲಾಕ್‌ ಡೆವಲಪ್‌ಮೆಂಟ್‌ ಕೌನ್ಸಿಲ್‌ ಕಚೇರಿಯಲ್ಲಿ ಕಸ ಗುಡಿಸುವ ಕೆಲಸ ಮಾಡುತ್ತಿರುವ ವ್ಯಕ್ತಿ. ಈತನ ತನ್ನ ಪತ್ನಿ ಸೋನಿಯಾ ಒಂದು ದಿನ ಇದೇ ಬ್ಲಾಕ್‌ನ ಅಧ್ಯಕ್ಷರಾಗ್ತಾರೆ ಅಂತ ಎಂದೂ ಭಾವಿಸಿರಲಿಲ್ಲವಂತೆ.

ಈ ತಿಂಗಳ ಆರಂಭದಲ್ಲಿ ನಡೆದ ಬ್ಲಾಕ್ ಅಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಸದಸ್ಯರಾಗಿದ್ದ ಸೋನಿಯಾ ಬ್ಲಾಕ್‌ ಅಧ್ಯಕ್ಷೆರಾಗಿದ್ದಾರೆ. ಉತ್ತರ ಪ್ರದೇಶದ ಸಹರಾನ್‌ಪುರದ ಬಾಲಿಯಖೇರಿ ಬ್ಲಾಕ್‌ನ ಮುಖ್ಯಸ್ಥರಾಗಿ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.

ನಲ್ಹೆರಾ ಗುಜ್ಜರ್ ಗ್ರಾಮದ ನಿವಾಸಿ ಸುನಿಲ್, ಬಾಲಿಯಖೇರಿ ಬ್ಲಾಕ್‌ನಲ್ಲಿ ಕಸ ಗುಡಿಸುವ ಕೆಲಸ ಮಾಡುತ್ತಿದ್ದಾರೆ. ಅವರು ತಮ್ಮ ಪತ್ನಿ ಸೋನಿಯಾ ಅವರನ್ನು 55 ನೇ ವಾರ್ಡ್‌ನಿಂದ ಬಿಡಿಸಿ ಚುನಾವಣೆಗೆ ಸ್ಪರ್ಧಿಸಿದರು. ಬಿಜೆಪಿ ಮುಖಂಡ ಮತ್ತು ಜಿಲ್ಲಾ ಪಂಚಾಯತ್ ಸದಸ್ಯ ಮುಖೇಶ್ ಚೌಧರಿ, 26 ವರ್ಷದ ವಿದ್ಯಾವಂತ ಸೋನಿಯಾ ಅವರನ್ನು ಈ ಹುದ್ದೆಗೆ ಅಭ್ಯರ್ಥಿಯನ್ನಾಗಿ ಮಾಡಿದರು.

ಪತಿ ಮತ್ತು ಅವರ ಕುಟುಂಬದವರು ಈ ಹಾದಿಯಲ್ಲಿ ತಮ್ಮನ್ನು ಬೆಂಬಲಿಸಿದ್ದಾರೆ ಎಂದು ಸೋನಿಯಾ ತಿಳಿಸಿದ್ದಾರೆ. ಸುನಿಲ್ ತಮ್ಮ ಕೆಲಸವನ್ನು ಮುಂದುವರಿಸಲು ನಿರ್ಧರಿಸಿದ್ದಾರೆ. ಪತಿ ಸುನಿಲ್ ಗಳಿಸಿದ ಸಂಬಳದಿಂದ ತನ್ನ ಮನೆ ಇನ್ನೂ ನಡೆಯುತ್ತಿದೆ ಎಂದು ಸೋನಿಯಾ ವಿವರಿಸಿದರು.

Last Updated : Jul 16, 2021, 7:20 AM IST

For All Latest Updates

ABOUT THE AUTHOR

...view details