ಕೋಲ್ಕತ್ತಾ/ಪಶ್ಚಿಮ ಬಂಗಾಳ:ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಕೋಲ್ಕತ್ತಾದಲ್ಲಿ ನಟ ಮಿಥುನ್ ಚಕ್ರವರ್ತಿಯವರನ್ನು ಶನಿವಾರ ಭೇಟಿ ಮಾಡಿದ್ದಾರೆ.
ಬೆಲ್ಗಾಚಿಯಾದಲ್ಲಿರುವ ಮಿಥುನ್ ನಿವಾಸಕ್ಕೆ ತೆರಳಿ ಕೈಲಾಶ್ ವಿಜಯವರ್ಗಿಯಾ ಮಾತುಕತೆ ನಡೆಸಿದ್ದಾರೆ. ನಟ ಮಿಥುನ್ ಚಕ್ರವರ್ತಿ ಬಿಜೆಪಿಗೆ ಸೇರುವ ಕುರಿತ ಊಹಾಪೋಹಗಳ ಬಗ್ಗೆ ವಿಜಯವರ್ಗಿಯಾ ಈ ಹಿಂದೆ "ನಾನು ಅವರೊಂದಿಗೆ (ಮಿಥುನ್ ಚಕ್ರವರ್ತಿ) ದೂರವಾಣಿಯಲ್ಲಿ ಮಾತನಾಡಿದ್ದೇನೆ. ಅವರೊಂದಿಗೆ ವಿವರವಾದ ಚರ್ಚೆಯ ನಂತರವೇ ನಾನು ಪ್ರತಿಕ್ರಿಯಿಸಲು ಸಾಧ್ಯವಾಗುತ್ತದೆ" ಎಂದು ಹೇಳಿದ್ರು. 70ರ ಹರೆಯದ ಚಕ್ರವರ್ತಿ ಎರಡು ವರ್ಷಗಳ ಕಾಲ ಟಿಎಂಸಿಗೆ ರಾಜ್ಯಸಭಾ ಸಂಸದರಾಗಿದ್ದರು. ನಂತರ ರಾಜೀನಾಮೆ ನೀಡಿದ್ದರು.