ಇಂದೋರ್, ಮಧ್ಯಪ್ರದೇಶ: ಆಗಾಗ ವಿಶಿಷ್ಟ ಕಾರಣಗಳಿಂದಾಗಿ ಸುದ್ದಿಯಾಗುವ ಸುಮಾರು 65 ವರ್ಷ ವಯಸ್ಸಿನ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಅವರು 60 ಪುಷ್ ಅಪ್ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.
ಇಂದೋರ್‌ನ ಮಹೇಶ್ವರಿ ಕಾಲೇಜಿನ ನಡೆದಿದೆ ಎನ್ನಲಾದ ಕಾರ್ಯಕ್ರಮವೊಂದರಲ್ಲಿ ವಿಜಯವರ್ಗೀಯ ಅವರು ವಿದ್ಯಾರ್ಥಿಗಳ ಒತ್ತಾಯದ ಮೇರೆಗೆ ವೇದಿಕೆಯ ಮೇಲೆಯೇ ಪುಷ್ ಅಪ್ಗಳನ್ನು ಮಾಡಿದ್ದಾರೆ. ಸುಮಾರು 60 ಪುಷ್ಅಪ್ಗಳನ್ನು ಮಾಡಿ ವಿದ್ಯಾರ್ಥಿಗಳನ್ನು ಬೆರಗುಗೊಳಿಸಿದ್ದಾರೆ.