ಕೋಲ್ಕತ್ತಾ: ಹೃದಯಾಘಾತದಿಂದ ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ರಾಜ್ಯ ಉಪಾಧ್ಯಕ್ಷ ರಾಜು ಸರ್ಕಾರ್ ನಿಧನರಾಗಿದ್ದಾರೆ.
ನಿನ್ನೆ ನಗರದ ಬಿಜೆಪಿ ಪ್ರಧಾನ ಕಚೇರಿ ಹೇಸ್ಟಿಂಗ್ಸ್ನಲ್ಲಿ ಬಿಜೆಪಿ ಸಮಾವೇಶದಲ್ಲಿ ರಾಜು ಸರ್ಕಾರ ಭಾಗಿಯಾಗಿದ್ದರು. ಚರ್ಚೆಯ ವೇಳೆ ಬಿಜೆಪಿ ಎರಡು ಬಣಗಳ ನಡುವಿನ ವಿವಾದವು ಉದ್ವಿಗ್ನತೆ ಸೃಷ್ಟಿಸಿತು. ಸದಸ್ಯರು ಪರಸ್ಪರ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದು, ಈ ವೇಳೆ ರಾಜುಗೆ ಹೃದಯಾಘಾತ ಸಂಭವಿಸಿದೆ. ಕೂಡಲೇ, ಆಸ್ಪತ್ರೆಗೆ ಕರೆದುಕೊಂಡು ಹೋದರೂ, ಅವರು ಬದುಕುಳಿಯಲಿಲ್ಲ.