ಕರ್ನಾಟಕ

karnataka

ETV Bharat / bharat

ಕೊಕೇನ್ ಹೊಂದಿದ್ದ ಆರೋಪ: ಕೋಲ್ಕತ್ತಾದಲ್ಲಿ ಬಿಜೆಪಿ ಯುವನಾಯಕಿ ಬಂಧನ - ಪಶ್ಚಿಮ ಬಂಗಾಳದ ಸುದ್ದಿ

ನೂರು ಗ್ರಾಮ್ ಕೊಕೇನ್ ಹೊಂದಿದ್ದ ಆರೋಪದಲ್ಲಿ ಪಶ್ಚಿಮ ಬಂಗಾಳದ ಬಿಜೆಪಿ ಯುವನಾಯಕಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

pamela goswami
ಪಮೇಲಾ ಗೋಸ್ವಾಮಿ

By

Published : Feb 19, 2021, 7:41 PM IST

ಕೋಲ್ಕತಾ (ಪಶ್ಚಿಮ ಬಂಗಾಳ):ತನ್ನ ಬ್ಯಾಗ್​ನಲ್ಲಿ ಕೊಕೇನ್ ಹೊಂದಿದ್ದ ಆರೋಪದ ಮೇಲೆ ಬಿಜೆಪಿ ಯುವ ನಾಯಕಿಯೊಬ್ಬಳನ್ನು ಬಂಧಿಸಲಾಗಿದೆ ಎಂದು ಪೊಲೀಸರ ಮಾಹಿತಿ ನೀಡಿದ್ದಾರೆ.

ಪಮೇಲಾ ಗೋಸ್ವಾಮಿ ಬಂಧಿತೆಯಾಗಿದ್ದು, ಆಕೆಯ ಸ್ನೇಹಿತ ಪ್ರಬೀರ್ ಕುಮಾರ್ ಡೇ ಅನ್ನು ನೂರು ಗ್ರಾಮ್ ಕೊಕೇನ್​ ಹೊಂದಿದ್ದ ನ್ಯೂ ಅಲಿಪೋರ್ ಪ್ರದೇಶದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ:ಪಂಚಮಸಾಲಿ ಮೀಸಲಾತಿಗೆ ನನ್ನ ಬೆಂಬಲವಿದೆ : ಡಿಸಿಎಂ ಸವದಿ ಸ್ಪಷ್ಟೀಕರಣ

ಪೊಲೀಸ್ ಮೂಲಗಳ ಪ್ರಕಾರ, ಗೋಸ್ವಾಮಿ ಬಿಜೆವೈಎಂನ ಹೂಗ್ಲಿ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದು, ಪಶ್ಚಿಮ ಬಂಗಾಳದ ಉನ್ನತ ಬಿಜೆಪಿ ಮುಖಂಡರು ಮತ್ತು ಸಂಸದರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಎಂದು ತಿಳಿದು ಬಂದಿದೆ.

ಪಮೇಲಾ ಗೋಸ್ವಾಮಿ ಕೊಕೇನ್ ಪೂರೈಸುವ ಜಾಲದಲ್ಲಿದ್ದರೆಂದು ಈ ಮೊದಲೇ ಮಾಹಿತಿ ಇದ್ದು, ಇಂದು ನಿಖರ ಮಾಹಿತಿ ಮೇರೆಗೆ ಕೊಕೇನ್ ಅನ್ನು ಗಿರಾಕಿಗಳಿಗೆ ಪೂರೈಸುವಾಗ ದಾಳಿ ಮಾಡಿ ರೆಡ್​ಹ್ಯಾಂಡಾಗಿ ಬಂಧಿಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details