ಕರ್ನಾಟಕ

karnataka

ETV Bharat / bharat

ಬಿಜೆಪಿ ಕಾರ್ಯಕರ್ತನ ತಾಯಿಯ ಬರ್ಬರ ಹತ್ಯೆ: ಟಿಎಂಸಿ ಗೂಂಡಾಗಳು ಕೃತ್ಯ ಆರೋಪ - ಟಿಎಂಸಿ ಗೂಂಡಾಗಳು ಹಲ್ಲೆ

ಮಗನ ಮೇಲೆ ಟಿಎಂಸಿ ಗೂಂಡಾಗಳು ಹಲ್ಲೆ ಮಾಡಿದಾಗ ತಡೆಯಲು ಹೋದ ತಾಯಿಯನ್ನೇ ಕಿಡಿಗೇಡಿಗಳು ಕೊಲೆ ಮಾಡಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ಕೇಳಿ ಬಂದಿದೆ.

Goghat
ಬಿಜೆಪಿ ಕಾರ್ಯಕರ್ಯನ ತಾಯಿಯ ಹತ್ಯೆ

By

Published : Apr 6, 2021, 10:06 AM IST

ಗೋಘಾಟ್ (ಪಶ್ಚಿಮ ಬಂಗಾಳ): ಟಿಎಂಸಿ ಗೂಂಡಾಗಳು ಬಿಜೆಪಿ ಕಾರ್ಯಕರ್ತನ ತಾಯಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ನಿನ್ನೆ ರಾತ್ರಿ ಗೋಘಾಟ್​ ಪಿಎಸ್​ನ ಕೃಷ್ಣಗಂಜ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಬಿಜೆಪಿ ಕಾರ್ಯಕರ್ಯನ ತಾಯಿಯ ಹತ್ಯೆ

ಮಾಧಾಬಿ ಅದಕ್ ಮೃತ ಮಹಿಳೆ. ನಿನ್ನೆ ರಾತ್ರಿ ಮಾಧಾಬಿ ಅವರ ಮಗನ ಮೇಲೆ ಟಿಎಂಸಿ ಗೂಂಡಾಗಳು ಹಲ್ಲೆ ಮಾಡಿದ್ದಾರೆ. ಇದನ್ನು ತಡೆಯಲು ಹೋದಾಗ ಆಕೆಯ ಮೇಲೆ ಹಲ್ಲೆ ನಡೆಸಿದ ಕಿಡಿಗೇಡಿಗಳು ಬರ್ಬವಾಗಿ ಕೊಲೆ ಮಾಡಿದ್ದಾರೆ. ಈ ಘಟನೆ ತಡರಾತ್ರಿ 1 ಗಂಟೆಗೆ ನಡೆದಿದೆ ಎನ್ನಲಾಗಿದೆ.

ಘಟನೆ ಬಗ್ಗೆ ಮಾಹಿತಿ ತಿಳಿದ ತಕ್ಷಣ ಗೋಘತ್‌ನ ಬಿಜೆಪಿ ಅಭ್ಯರ್ಥಿ ಬಿಸ್ವಾನಾಥ್ ಕರಕ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇನ್ನು ಘಟನೆಗೆ ಟಿಎಂಸಿ ಕಾರಣವಲ್ಲ ಎಂದು ಟಿಎಂಸಿ ಅಭ್ಯರ್ಥಿಗಳು ಆರೋಪವನ್ನು ನಿರಾಕರಿಸಿದ್ದಾರೆ.

ABOUT THE AUTHOR

...view details