ಕರ್ನಾಟಕ

karnataka

ETV Bharat / bharat

ದೀದಿನಾಡಲ್ಲಿ ಪರಿವರ್ತನಾ ಯಾತ್ರೆ : ಭದ್ರತಾ ಸಿಬ್ಬಂದಿ, ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ - ಪಶ್ಚಿಮ ಬಂಗಾಳ ಸುದ್ದಿ

ಈಗ ಬ್ಯಾರಕ್​ಪುರದಲ್ಲಿ ಭದ್ರತಾ ಸಿಬ್ಬಂದಿ ಪರಿವರ್ತನಾ ರ್ಯಾಲಿಯನ್ನು ತಡೆದ ಆರೋಪದಲ್ಲಿ ಬಿಜೆಪಿ ಕಾರ್ಯಕರ್ತರು ಘರ್ಷಣೆಗೆ ಇಳಿದಿದ್ದಾರೆ..

BJP workers clash with security personnel in West Bengal
ದೀದಿನಾಡಲ್ಲಿ ಪರಿವರ್ತನಾ ಯಾತ್ರೆ: ಭದ್ರತಾ ಸಿಬ್ಬಂದಿ, ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

By

Published : Feb 24, 2021, 7:53 PM IST

ಕೋಲ್ಕತಾ(ಪಶ್ಚಿಮ ಬಂಗಾಳ):ವಿಧಾನಸಭಾ ಚುನಾವಣೆಗಳ ಹಿನ್ನೆಲೆ ಬಿಜೆಪಿ ಪಶ್ಚಿಮ ಬಂಗಾಳದ ಹಲವೆಡೆ ಪರಿವರ್ತನಾ ಯಾತ್ರೆಗಳನ್ನು ನಡೆಸುತ್ತಿದೆ. ಈ ಹಿನ್ನೆಲೆ ಬ್ಯಾರಕ್​ಪುರದಲ್ಲಿ ನಡೆಯುತ್ತಿದ್ದ ಪರಿವರ್ತನಾ ಯಾತ್ರೆ ಅಡ್ಡಿಪಡಿಸಿದ ಆರೋಪದಲ್ಲಿ ಭದ್ರತಾ ಸಿಬ್ಬಂದಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ಏರ್ಪಟ್ಟಿದೆ.

ಭದ್ರತಾ ಸಿಬ್ಬಂದಿ, ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ..

ನಾಡಿಯಾ ಜಿಲ್ಲೆಯಲ್ಲಿ ಫೆಬ್ರವರಿ 6ರಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ, ಪರಿವರ್ತನಾ ಯಾತ್ರೆಗೆ ಚಾಲನೆ ನೀಡಿದ್ದರು. ಮುಂದಿನ ವಿಧಾನಸಭಾ ಚುನಾವಣೆ ಹಿನ್ನೆಲೆ ಈ ಯಾತ್ರೆ ಕೈಗೊಳ್ಳಲಾಗಿತ್ತು.

ಇದನ್ನೂ ಓದಿ:ಬಡ ಕಾರ್ಮಿಕನಿಗೆ ಸಿಕ್ತು 70 ಲಕ್ಷ ರೂ. ಮೌಲ್ಯದ ವಜ್ರ... ಅಧಿಕಾರಿಗಳಿಗೆ ಹಸ್ತಾಂತರ!

ಸೂಕ್ಷ್ಮ ಸ್ಥಳಗಳಲ್ಲಿ ಅನುಮತಿ ಪಡೆಯದೇ ಬಿಜೆಪಿ ಕಾರ್ಯಕರ್ತರು ನಡೆಸುತ್ತಿದ್ದ ಪರಿವರ್ತನಾ ಯಾತ್ರೆಯನ್ನ ಫೆಬ್ರವರಿ 8ರಂದು ಮುರ್ಷಿದಾಬಾದ್ ಜಿಲ್ಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಈಗ ಬ್ಯಾರಕ್​ಪುರದಲ್ಲಿ ಭದ್ರತಾ ಸಿಬ್ಬಂದಿ ಪರಿವರ್ತನಾ ರ್ಯಾಲಿಯನ್ನು ತಡೆದ ಆರೋಪದಲ್ಲಿ ಬಿಜೆಪಿ ಕಾರ್ಯಕರ್ತರು ಘರ್ಷಣೆಗೆ ಇಳಿದಿದ್ದಾರೆ.

ABOUT THE AUTHOR

...view details