ಈಸ್ಟ್ ಮಿಡ್ನಾಪುರ( ಪ.ಬಂಗಾಳ)ಬಂಗಾಳದಲ್ಲಿ ಇನ್ನೂ ನಾಲ್ಕೈದು ಹಂತದ ಚುನಾವಣೆ ಬಾಕಿ ಇದೆ. ಈಗಾಗಲೇ ರಾಜ್ಯದಲ್ಲಿ ಭಾರಿ ಹಿಂಸಾಚಾರ ಭುಗಿಲೆದ್ದಿದೆ.
ಬಂಗಾಳದಲ್ಲಿ ನಿಲ್ಲದ ಹಿಂಸಾಚಾರ: ಮಿಡ್ನಾಪುರದಲ್ಲಿ ಬಿಜೆಪಿ ಕಾರ್ಯಕರ್ತನ ಮೃತದೇಹ ವಶಕ್ಕೆ ಪಡೆದ ಪೊಲೀಸರು - ಬಂಗಾಳದಲ್ಲಿ ಬಿಜೆಪಿ ಹಾಗೂ ಟಿಎಂಸಿ ನಡುವೆ ಫೈಟ್
ಬಂಗಾಳದಲ್ಲಿ ಬಿಜೆಪಿ ಹಾಗೂ ಟಿಎಂಸಿ ನಡುವಿನ ಜಟಾಪಟಿ ಮುಂದುವರೆದಿದೆ. ಈ ಮತ್ತೆ ಬಿಜೆಪಿ ಕಾರ್ಯಕರ್ತನ ಮೃತದೇಹ ಪತ್ತೆಯಾಗಿದ್ದು ಟಿಎಂಸಿಯಿಂದ ಈ ಕೊಲೆ ನಡೆದಿದೆ ಎಂದು ಬಿಜೆಪಿ ಆರೋಪಿಸಿದೆ.
ಮೂರನೇ ಹಂತದ ಮತದಾನದ ವೇಳೆ ಹಲವು ಅಭ್ಯರ್ಥಿಗಳ ಮೇಲೆ ಹಲ್ಲೆ ನಡೆದಿದೆ. ಬಿಜೆಪಿ ಹಾಗೂ ಟಿಎಂಸಿ ನಡುವೆ ಮಾರಾಮಾರಿಗಳು ಮುಂದುವರೆದಿವೆ. ಈ ನಡುವೆ ಟಿಎಂಸಿ ಕಾರ್ಯಕರ್ತರು ಬಿಜೆಪಿ ಸದಸ್ಯರ ಮೇಲೆ, ಬಿಜೆಪಿ ಬೆಂಬಲಿಗರು ತೃಣಮೂಲ ಕಾಂಗ್ರೆಸ್ ಸಪೋರ್ಟ್ಸ್ಗಳ ಮೇಲೆ ಹಲ್ಲೆ ಮಾಡುತ್ತಿದ್ದಾರೆ.
ಈ ಮಾತಿಗೆ ಇಂಬು ನೀಡುವಂತೆ ಈಸ್ಟ್ ಮಿಡ್ನಾಪುರದಲ್ಲಿ ಬಿಜೆಪಿ ಕಾರ್ಯಕರ್ತನ ಮೃತದೇಹವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತ ಕಾರ್ಯಕರ್ತನನ್ನು ಶಂಭು ಬರೈ ಎಂದು ಗುರುತಿಸಲಾಗಿದೆ. ನಮ್ಮ ಕಾರ್ಯಕರ್ತನನ್ನು ಟಿಎಂಸಿ ಕಡೆ ಜನ ಕೊಂದು ಹಾಕಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಆದರೆ ಈ ಆರೋಪವನ್ನು ಟಿಎಂಸಿ ಅಲ್ಲಗಳೆದಿದೆ.