ಸಾಲ್ಬೊನಿ (ಪಶ್ಚಿಮ ಬಂಗಾಳ): ಇಲ್ಲಿನ ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಹಂತದ ಚುನಾವಣೆಗೆ ಕೇವಲ 24 ಗಂಟೆಗಳ ಮೊದಲು ಪಶ್ಚಿಮ ಮೇದಿನಿಪುರದ ಸಾಲ್ಬೊನಿಯಲ್ಲಿ ಬಿಜೆಪಿ ಕಾರ್ಯಕರ್ತನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಬಂಗಾಳ ಚುನಾವಣೆ ಮುನ್ನಾ ದಿನ ಬಿಜೆಪಿ ಕಾರ್ಯಕರ್ತನ ಶವ ಪತ್ತೆ: ಟಿಎಂಸಿ ವಿರುದ್ಧ ಆರೋಪ - ಬಿಜೆಪಿ ಕಾರ್ಯಕರ್ತರ ಕೊಲೆ
ಪಶ್ಚಿಮ ಮೇದಿನಿಪುರದ ಸಾಲ್ಬೊನಿಯಲ್ಲಿ ಬಿಜೆಪಿ ಕಾರ್ಯಕರ್ತನ ಮೃತದೇಹ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಬಿಜೆಪಿ ಕಾರ್ಯಕರ್ತನ ಶವ ಪತ್ತೆ
ಬಿಜೆಪಿ ಕಾರ್ಯಕರ್ತ ಲಾಲ್ಮೋಹನ್ ಸೊರೆನ್ (22) ಮೃತ ವ್ಯಕ್ತಿ.
ಇಂದು ಬೆಳಗ್ಗೆ ಸಾಲ್ಬೊನಿಯ ಬಾಗ್ಮರಿ ಗ್ರಾಮದ ಬಳಿಯ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಆತನ ಶವ ಪತ್ತೆಯಾಗಿದೆ. ಆತನನ್ನು ಕೆಲವು ಟಿಎಂಸಿ ಕಾರ್ಯಕರ್ತರು ಕೊಂದು ನೇಣಿಗೆ ಹಾಕಿದ್ದಾರೆ ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ, ಟಿಎಂಸಿ ಈ ಆರೋಪವನ್ನು ನಿರಾಕರಿಸಿದೆ.
Last Updated : Mar 26, 2021, 2:20 PM IST