ಕರ್ನಾಟಕ

karnataka

ETV Bharat / bharat

ಸಚಿವೆ ಸ್ಮೃತಿ ಇರಾನಿ ಭೇಟಿಗೋಸ್ಕರ ಬಂದ ಮಹಿಳೆಯರ ಮೇಲೆ ಬಿಜೆಪಿ ಕಾರ್ಯಕರ್ತರಿಂದ ಹಲ್ಲೆ ಆರೋಪ - ಮಹಿಳೆಯರ ಮೇಲೆ ಬಿಜೆಪಿ ಕಾರ್ಯಕರ್ತರಿಂದ ಹಲ್ಲೆ

ಕೇಂದ್ರ ಸಚಿವೆ ಸ್ಮೃತಿ ಇರಾನಿ ಭೇಟಿಗೆ ಆಗಮಿಸಿದ್ದ ಮಹಿಳೆಯರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಅಮೇಥಿಯಲ್ಲಿ ನಡೆದಿದೆ.

Union Minister Smriti Irani in amethi
Union Minister Smriti Irani in amethi

By

Published : Dec 24, 2021, 7:47 PM IST

ಅಮೇಥಿ(ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ಮತ್ತೊಂದು ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವ ಕನಸು ಕಾಣುತ್ತಿರುವ ಬಿಜೆಪಿ ಮೇಲಿಂದ ಮೇಲೆ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡ್ತಿದೆ. ಇದರ ಮಧ್ಯೆ ಬಿಜೆಪಿ ಕಾರ್ಯಕರ್ತರು ಮಹಿಳೆಯ ಮೇಲೆ ಅಮಾನವೀಯ ರೀತಿ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಸಚಿವೆ ಸ್ಮೃತಿ ಇರಾನಿ ಭೇಟಿಗೋಸ್ಕರ ಬಂದ ಮಹಿಳೆಯರ ಮೇಲೆ ಬಿಜೆಪಿ ಕಾರ್ಯಕರ್ತರಿಂದ ಹಲ್ಲೆ

ಉತ್ತರ ಪ್ರದೇಶದ ಅಮೇಥಿಯಲ್ಲಿ ಈ ಘಟನೆ ನಡೆದಿದ್ದು, ನೀರಿನ ಕೊರತೆ ಬಗ್ಗೆ ದೂರು ನೀಡಲು ಆಗಮಿಸಿದ್ದ ಮಹಿಳೆಯರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಈ ವೇಳೆ ನಗರಸಭೆ ಅಧ್ಯಕ್ಷರು ಹಾಗೂ ಅವರ ಪುತ್ರ ಸಹ ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾರೆಂದು ತಿಳಿದು ಬಂದಿದೆ. ವಿಶೇಷವೆಂದರೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಕಾರ್ಯಕ್ರಮಕ್ಕೆ ಬರುವುದಕ್ಕೂ ಮುಂಚಿತವಾಗಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಇದನ್ನೂ ಓದಿರಿ:ಕಳೆದ ಐದು ತಿಂಗಳಲ್ಲಿ 1,076 ಅನ್ನದಾತರು ಆತ್ಮಹತ್ಯೆ: ಸದನದಲ್ಲಿ ಮಾಹಿತಿ ನೀಡಿದ ಮಹಾರಾಷ್ಟ್ರ ಸರ್ಕಾರ

ಅಮೇಥಿಯ ಜೈಸ್​ ಪಟ್ಟಣದ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹಲವು ಯೋಜನೆ ಉದ್ಘಾಟನೆ ಮಾಡಲು ಆಗಮಿಸಿದ್ದರು. ಇದರ ಮಾಹಿತಿ ಪಡೆದಿದ್ದ ಬಡಾವಣೆಯ ವಾರ್ಡ್​​ ಸಂಖ್ಯೆ 9ರ ಮಹಿಳೆಯರು ಸ್ಥಳಕ್ಕಾಗಮಿಸಿ ನೀರಿನ ಅಭಾವದ ಕುರಿತು ದೂರು ನೀಡಿದ್ದರು.

ಇದರ ಮಾಹಿತಿ ಪಡೆದುಕೊಂಡ ಪುರಸಭೆ ಅಧ್ಯಕ್ಷ ಮಹೇಶ್ ಸೋಂಕರ್​ ಮತ್ತು ಅವರ ಪುತ್ರ ಭಾನು ಸೋಂಕರ್​ ಮಹಿಳೆಯರ ಬಳಿ ಹೋಗಿ ಅಸಭ್ಯವಾಗಿ ವರ್ತಿಸಿದ್ದು, ಹಲ್ಲೆ ನಡೆಸಿದ್ದಾರೆ. ಈ ವೇಳೆ ಮಧ್ಯಪ್ರವೇಶ ಮಾಡಿರುವ ಪೊಲೀಸರು ಪ್ರಕರಣ ತಿಳಿಗೊಳಿಸಿದ್ದಾರೆ.

ಘಟನೆ ಬಗ್ಗೆ ಮಾತನಾಡಿರುವ ಮಹಿಳೆ ಸುಷ್ಮಾ, ತಮ್ಮ ಮೇಲೆ ಆಗಿರುವ ದೌರ್ಜನ್ಯದ ಬಗ್ಗೆ ಮಾಧ್ಯಮದ ಮುಂದೆ ಹೇಳಿಕೊಂಡಿದ್ದು, ಮದುವೆಯಾದಾಗಿನಿಂದಲೂ ನೀರು ತುಂಬಿಸಲು ತಾವು ಸಮಸ್ಯೆ ಎದುರಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಇದೇ ವಿಚಾರವಾಗಿ ಸಚಿವೆಗೆ ಮಾಹಿತಿ ನೀಡಲು ತಾವು ಆಗಮಿಸಿದ್ದ ವೇಳೆ ಹಲ್ಲೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details