ಕರ್ನಾಟಕ

karnataka

ETV Bharat / bharat

ಬಂಗಾಳ ಜನರ ಕಲ್ಯಾಣಕ್ಕಾಗಿ ಬಿಜೆಪಿ ಕೆಲಸ ಮಾಡಲಿದೆ, ಆದ್ರೆ ಟಿಎಂಸಿ ಶಿಸ್ತು ಬದ್ಧವಾಗಿರಲಿ: ವಿಜಯ ವರ್ಗೀಯಾ - ಮಮತಾ ಬ್ಯಾನರ್ಜಿ

ದೀದಿ ನಾಡಲ್ಲಿ ತೃಣಮೂಲ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದು, ಅದ್ಭುತ ಗೆಲುವು ದಾಖಲು ಮಾಡಿರುವ ಮಮತಾ ಬ್ಯಾನರ್ಜಿಗೆ ಬಿಜೆಪಿ ಮುಖಂಡ ಕೈಲಾಶ್​ ವಿಜಯವರ್ಗೀಯಾ ಅಭಿನಂದನೆ ಸಲ್ಲಿಸಿದ್ದಾರೆ.

Kailash Vijayvargiya
Kailash Vijayvargiya

By

Published : May 3, 2021, 3:21 PM IST

Updated : May 3, 2021, 3:38 PM IST

ನವದೆಹಲಿ: ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್​​ ಅದ್ಭುತ ಪ್ರದರ್ಶನ ನೀಡಿದ್ದು, ಸತತ ಮೂರನೇ ಅವಧಿಗೆ ಸರ್ಕಾರ ರಚನೆ ಮಾಡಲು ಅಣಿಯಾಗಿದೆ. ಈ ಗೆಲುವಿನ ಯಶಸ್ಸು ಮಮತಾ ಬ್ಯಾನರ್ಜಿಗೆ ಸಲ್ಲುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್​ ವಿಜಯ ವರ್ಗೀಯಾ ಅಭಿಪ್ರಾಯಪಟ್ಟಿದ್ದಾರೆ.

ಮಮತಾ ಬ್ಯಾನರ್ಜಿಗೆ ವಿಜಯವರ್ಗೀಯಾ ಅಭಿನಂದನೆ

ಮತದಾನದ ಫಲಿತಾಂಶವನ್ನ ತಮ್ಮ ಪಕ್ಷ ಆತ್ಮಾವಲೋಕನ ಮಾಡಿಕೊಳ್ಳಲಿದೆ ಎಂದು ತಿಳಿಸಿರುವ ವಿಜಯ ವರ್ಗಿಯಾ, ಈ ವಿಜಯದ ಸಂಭ್ರಮದಲ್ಲಿ ಟಿಎಂಸಿ ನಮ್ಮ ಕಚೇರಿಗಳಿಗೆ ಹಾನಿಯಾಗದಂತೆ ವರ್ತನೆ ಮಾಡಲಿ ಎಂದಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ನಾವು ಅಭಿವೃದ್ಧಿ ವಿಷಯದಲ್ಲಿ ಸ್ಪರ್ಧೆ ಮಾಡಿದ್ದೇವೆ. ಯಾವುದೇ ರಾಜಕೀಯ ವೈರತ್ವಕ್ಕೆ ಇಲ್ಲಿ ಅವಕಾಶವಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಕೋಟ್ಯಧಿಪತಿ ವಿರುದ್ಧ ಗೆದ್ದ ಕೂಲಿ ಕಾರ್ಮಿಕನ ಪತ್ನಿ ಚಂದನಾ.. ಈಕೆಯ ಆಸ್ತಿ ಕೇವಲ 31 ಸಾವಿರ!

ನಾವು ರಾಜ್ಯದ ಅಭಿವೃದ್ಧಿ ವಿಷಯಕ್ಕೆ ಬಂದಾಗ ಮಮತಾ ಬ್ಯಾನರ್ಜಿ ಅವರೊಂದಿಗೆ ನಿಲ್ಲುತ್ತೇವೆ. ಆದರೆ, ಅವರ ಪಕ್ಷದ ಸದಸ್ಯರು ನಮ್ಮ ಮೇಲೆ ಆಕ್ರಮಣ ಮಾಡಬಾರದು. ಜನರ ಆಕಾಂಕ್ಷೆ ಈಡೇರಿಸಲು ನಾವು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸಾಧ್ಯವಿರುವ ಎಲ್ಲ ಬೆಂಬಲ ನೀಡುತ್ತೇವೆ ಎಂದು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ 292 ಕ್ಷೇತ್ರಗಳಿಗೆ 8 ಹಂತಗಳಲ್ಲಿ ಚುನಾವಣೆ ನಡೆದಿತ್ತು. ಈ ವೇಳೆ, ಟಿಎಂಸಿ ಹಾಗೂ ಬಿಜೆಪಿ ಅನೇಕ ಕ್ಷೇತ್ರಗಳಲ್ಲಿ ಕೈ-ಕೈ ಮೀಲಾಯಿಸಿತು. ಆದರೆ, ಇದೀಗ ಫಲಿತಾಂಶ ಬಹಿರಂಗಗೊಂಡಿದ್ದು, ತೃಣಮೂಲ ಕಾಂಗ್ರೆಸ್​ 217 ಕ್ಷೇತ್ರಗಳಲ್ಲಿ ಗೆಲುವು ದಾಖಲು ಮಾಡಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ವಿಶೇಷ ಎಂದರೆ ಮಮತಾ ಬ್ಯಾನರ್ಜಿ ಸ್ಪರ್ಧೆ ಮಾಡಿದ್ದ ನಂದಿಗ್ರಾಮದಲ್ಲಿ ಸುವೇಂದು ಅಧಿಕಾರಿ ವಿರುದ್ಧ ಸೋಲು ಕಂಡಿದ್ದಾರೆ.

Last Updated : May 3, 2021, 3:38 PM IST

ABOUT THE AUTHOR

...view details