ಕರ್ನಾಟಕ

karnataka

ETV Bharat / bharat

ಬಿಜೆಪಿ ಸಾವರ್ಕರ್ ಅವರನ್ನೇ ರಾಷ್ಟ್ರಪಿತ ಎಂದು ಘೋಷಣೆ ಮಾಡಬಹುದು ; ಓವೈಸಿ ವ್ಯಂಗ್ಯ - ಅಸಾದುದ್ದೀನ್ ಓವೈಸಿ ಆರೋಪ

ಸಾವರ್ಕರ‌ ಜೈಲಿನಲ್ಲಿದ್ದಾಗ ಬ್ರಿಟಿಷರಿಗೆ ಕ್ಷಮಾದಾನ ಅರ್ಜಿ ಸಲ್ಲಿಸುವಂತೆ ಹೇಳಿದ್ದೇ ಗಾಂಧೀಜಿ. ಅದನ್ನು ಇತ್ತೀಚೆಗೆ ದೊಡ್ಡ ವಿಷಯವನ್ನಾಗಿ ಮಾಡಲಾಗುತ್ತದೆ ಎಂದ ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಹೇಳಿಕೆಗೆ ಹೈದರಾಬಾದ್​ ಸಂಸದ ಓವೈಸಿ ತಿರುಗೇಟು ನೀಡಿದ್ದಾರೆ..

BJP Will Soon Declare Savarkar "Father Of Nation": Asaduddin Owaisi
BJP Will Soon Declare Savarkar "Father Of Nation": Asaduddin Owaisi

By

Published : Oct 13, 2021, 5:33 PM IST

ಹೈದರಾಬಾದ್ :ಭಾರತೀಯ ಜನತಾ ಪಾರ್ಟಿ ಶೀಘ್ರದಲ್ಲಿಯೇ ವಿನಾಯಕ್ ದಾಮೋದರ್ ಸಾವರ್ಕರ್​ ಅವರನ್ನು ಭಾರತ ದೇಶದ ರಾಷ್ಟ್ರಪಿತ ಎಂದು ಘೋಷಿಸಲಿದೆ ಎಂದು ಎಐಎಂಐಎಂ (ಆಲ್​ ಇಂಡಿಯಾ ಮಜಿಲಿಸ್​-ಇ-ಇತ್ಹೇದುಲ್​ ಮಸ್ಲೀಮೀನ್​) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವ್ಯಂಗ್ಯವಾಡಿದ್ದಾರೆ.

ಬಿಜೆಪಿಯ ನಾಯಕರು ಯಾವಾಗಲೂ ತಿರುಚಿದ ಇತಿಹಾಸವನ್ನು ಹೇಳಿಕೊಂಡು ಬರುತ್ತಿದ್ದಾರೆ. ಇಲ್ಲಿಯೂ ಅದೇ ಕೆಲಸ ಮಾಡಿದ್ದಾರೆ. ಇತಿಹಾಸ ಹೇಳುವುದೊಂದು ಇವರು ಹೇಳುವುದೇ ಮತ್ತೊಂದು. ಇದೇ ರೀತಿ ಮುಂದುವರೆದರೆ ಮುಂದಿನ ದಿನಮಾನದಲ್ಲಿ ಮಹಾತ್ಮ ಗಾಂಧಿ ಅವರ ಬದಲಾಗಿ, ವಿಡಿ ಸಾವರ್ಕರ್ ಅವರನ್ನೇ ರಾಷ್ಟ್ರಪಿತ ಎಂದು ಘೋಷಣೆ ಮಾಡಬಹುದು ಎಂದು ವ್ಯಂಗ್ಯದ ಮೂಲಕ ಓವೈಸಿ ಗಂಭೀರ ಆರೋಪ ಮಾಡಿದ್ದಾರೆ.

ಕೇಂದ್ರ ರಕ್ಷಣಾ ರಚಿವ ರಾಜನಾಥ್​ ಸಿಂಗ್​ ಅವರು ನವದೆಹಲಿಯ ಅಂಬೇಡ್ಕರ್​ ಇಂಟರ್ನ್ಯಾಷನಲ್​ ಸೆಂಟರ್​ನಲ್ಲಿ ಮಂಗಳವಾರ ನಡೆದ 'ವೀರ ಸಾವರ್ಕರ್: ದೇಶ ವಿಭಜನೆಯನ್ನು ತಡೆಯಬಹುದಾದ ವ್ಯಕ್ತಿ' ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಮಹಾತ್ಮಾ ಗಾಂಧಿಯವರ ಕೋರಿಕೆಯ ಮೇರೆಗೆಯೇ ವಿಡಿ ಸಾವರ್ಕರ್ ಬ್ರಿಟಿಷರಿಗೆ ಕ್ಷಮಾಪಣಾ ಪತ್ರವನ್ನು ಬರೆದಿದ್ದರು.

ಅರ್ಜಿ ಸಲ್ಲಿಸಿದ್ದನ್ನೇ ಇತ್ತೀಚೆಗೆ ದೊಡ್ಡ ವಿಷಯ ಮಾಡಿ ಆಡಿಕೊಳ್ಳಲಾಗುತ್ತಿದೆ. ಆದರೆ, ಅಸಲಿ ಚಿತ್ರಣವನ್ನು ಉದ್ದೇಶಪೂರ್ವಕವಾಗಿಯೇ ಮುಚ್ಚಿಡಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಖಂಡಿಸಿ ಓವೈಸಿ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ABOUT THE AUTHOR

...view details