ಕರ್ನಾಟಕ

karnataka

ETV Bharat / bharat

'ಅಸ್ಸೋಂನಲ್ಲಿ ಬಿಜೆಪಿ ಗೆಲುವು ಖಚಿತ': ದೇವೇಂದ್ರ ಫಡ್ನವೀಸ್ - ದೇವೇಂದ್ರ ಫಡ್ನವೀಸ್ ಅಸ್ಸೋಂ ಭೇಟಿ

ಅಸ್ಸೋಂನಲ್ಲಿ ಬಿಜೆಪಿ ಪಕ್ಷ ಗೆಲುವು ಸಾಧಿಸಲಿದೆ ಎಂದು ಗುವಾಹಟಿ ಭೇಟಿ ವೇಳೆ ಬಿಜೆಪಿ ಮುಖಂಡ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.

Fadnavis
ದೇವೇಂದ್ರ ಫಡ್ನವೀಸ್

By

Published : Mar 17, 2021, 10:03 AM IST

ಗುವಾಹಟಿ: ಅಸ್ಸೋಂನಲ್ಲಿ ಬಿಜೆಪಿ ಪಕ್ಷವು ದೊಡ್ಡ ಮಟ್ಟದಲ್ಲಿ ಗೆಲುವು ದಾಖಲಿಸಲಿದೆ ಎಂದು ಬಿಜೆಪಿ ಮುಖಂಡ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಯ ಕುರಿತು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರ ಭವಿಷ್ಯವಾಣಿಯ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಅಸ್ಸೋಂನಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ನಮ್ಮ ವಿರೋಧಿಗಳು ಸಹ ಒಪ್ಪಿಕೊಂಡಿದ್ದಾರೆ. ಶರದ್ ಪವಾರ್ ಅವರ ಸಂಪೂರ್ಣ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ. ಅಸ್ಸೋಂನಲ್ಲಿ ಬಿಜೆಪಿ ಗೆಲುವು ಖಚಿತ, ನಾವು ದೊಡ್ಡ ಗೆಲುವು ದಾಖಲಿಸುತ್ತೇವೆ" ಎಂದರು.

ಫಡ್ನವೀಸ್ ಅವರು ಗುವಾಹಟಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದಾರೆ.

ಇನ್ನು ಈ ಹಿಂದೆ, ಅಸ್ಸೋಂನಲ್ಲಿ ಬಿಜೆಪಿ ಅಧಿಕಾರವನ್ನು ಉಳಿಸಿಕೊಳ್ಳಲಿದೆ. ಆದರೆ ಇತರ ರಾಜ್ಯಗಳಲ್ಲಿ ಬೇರೆ ಪಕ್ಷ ಗೆಲುವು ಸಾಧಿಸುತ್ತದೆ ಎಂದು ಶರದ್ ಪವಾರ್ ಭಾನುವಾರ ಹೇಳಿದ್ದರು.

ABOUT THE AUTHOR

...view details