ನವದೆಹಲಿ: ಅಸ್ಸೋಂ ಮತ್ತು ಪಶ್ಚಿಮಬಂಗಾಳದ ಮತದಾರರಿಗೆ ಗೃಹ ಸಚಿವ ಅಮಿತ್ ಶಾ ಧನ್ಯವಾದ ಹೇಳಿದ್ದಾರೆ. ಹೆಚ್ಚಿನ ಮತದಾನವು ಜನರಲ್ಲಿನ ಉತ್ಸಾಹವನ್ನು ತೋರಿಸುತ್ತದೆ ಎಂದಿದ್ದಾರೆ.
ಅಸ್ಸೋಂನಲ್ಲಿ 40 ಸ್ಥಾನಗಳಲ್ಲಿ 37 ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ. ಪಶ್ಚಿಮ ಬಂಗಾಳದಲ್ಲಿ ಶೇ. 84 ರಷ್ಟು ಮತದಾನವಾಗಿದ್ದು, ರಾಜ್ಯದ ಜನರು ಬದಲಾವಣೆಯನ್ನು ಬಯಸುತ್ತಿದ್ದಾರೆ ಎಂಬುದನ್ನು ಇದು ಸಾಬೀತುಪಡಿಸುತ್ತದೆ ಎಂದು ಅವರು ಹೇಳಿದರು.
"ಪಶ್ಚಿಮ ಬಂಗಾಳ ಮತ್ತು ಅಸ್ಸೋಂನಲ್ಲಿ ಮೊದಲ ಹಂತದ ಮತದಾನ ಶನಿವಾರ ಮುಕ್ತಾಯವಾಗಿದೆ. ನಮಗೆ ಮತ ಹಾಕಿದ್ದಕ್ಕಾಗಿ ಎರಡೂ ರಾಜ್ಯಗಳ ಜನರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಮತದಾರರ ಸಂಖ್ಯೆ ಹೆಚ್ಚಳವಾಗಿರುವುದು ಜನರಲ್ಲಿನ ಉತ್ಸಾಹವನ್ನು ತೋರಿಸುತ್ತದೆ ”ಎಂದು ಅವರು ಹೇಳಿದರು.
ಎರಡೂ ರಾಜ್ಯಗಳು ರಾಜಕೀಯ ಹಿಂಸಾಚಾರಕ್ಕೆ ಹೆಸರುವಾಸಿಯಾಗಿವೆ. ಆದರೆ ಈ ಬಾರಿ ಮೊದಲ ಹಂತದ ಮತದಾನದ ವೇಳೆ ಯಾರೂ ಸಾವನ್ನಪ್ಪಿಲ್ಲ ಮತ್ತು ಮತದಾನ ಯಶಸ್ವಿಯಾಗಿ ಪೂರ್ಣಗೊಂಡಿದ್ದಕ್ಕಾಗಿ ಚುನಾವಣಾ ಆಯೋಗಕ್ಕೆ ಅಮಿತ್ ಶಾ ಧನ್ಯವಾದ ಅರ್ಪಿಸಿದರು.