ತಿರುವನಂತಪುರಂ (ಕೇರಳ):ಕೇರಳದಲ್ಲಿನ ರಾಜಕೀಯ ಹಿಂಸಾಚಾರಕ್ಕೆ ಬಿಜೆಪಿ ಅಂತ್ಯ ಹಾಡಲಿದೆ ಎಂದು ತಿರುವನಂತಪುರದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಕೇರಳದಲ್ಲಿನ ರಾಜಕೀಯ ಹಿಂಸಾಚಾರಕ್ಕೆ ಬಿಜೆಪಿ ಅಂತ್ಯ ಹಾಡಲಿದೆ: ರಾಜನಾಥ್ ಸಿಂಗ್ - ಕೇರಳ ವಿಧಾನಸಭೆಯ ಚುನಾವಣೆ
ಕೇರಳದಲ್ಲಿ ನಡೆಯುತ್ತಿರುವ ರಾಜಕೀಯ ಹಿಂಸಾಚಾರಕ್ಕೆ ಬಿಜೆಪಿ ಅಂತ್ಯ ಹಾಡಲಿದೆ. ಮಾತು ಮತ್ತು ಕಾರ್ಯಗಳಲ್ಲಿ ಹೆಚ್ಚಿನ ವ್ಯತ್ಯಾಸವಿರುವುದರಿಂದ ಎಲ್ಡಿಎಫ್ ಮತ್ತು ಯುಡಿಎಫ್ಗಳು ಸಾಮಾನ್ಯ ಜನರ ವಿಶ್ವಾಸಾರ್ಹತೆ ಕಳೆದುಕೊಂಡಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್
ರಕ್ಷಣಾ ಸಚಿವ ರಾಜನಾಥ್ ಸಿಂಗ್
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಂಗ್, ಕೇರಳಕ್ಕೆ ಹೊಸ ರಾಜಕೀಯ ಬದಲಾವಣೆ ಬೇಕು. ಬಿಜೆಪಿ ಅದನ್ನು ಒದಗಿಸಬಲ್ಲದು. ಸುಳ್ಳು ಭರವಸೆಗಳನ್ನು ನೀಡುವ ಬದಲು ಎಲ್ಡಿಎಫ್ ಭರವಸೆಗಳ ಬಗ್ಗೆ 'ಆಕ್ಷನ್ ಟೇಕನ್ ರಿಪೋರ್ಟ್' ತರಬೇಕು. ಕೇರಳದಲ್ಲಿ ನಡೆಯುತ್ತಿರುವ ರಾಜಕೀಯ ಹಿಂಸಾಚಾರಕ್ಕೆ ಬಿಜೆಪಿ ಅಂತ್ಯ ಹಾಡಲಿದೆ. ಮಾತು ಮತ್ತು ಕಾರ್ಯಗಳಲ್ಲಿ ಹೆಚ್ಚಿನ ವ್ಯತ್ಯಾಸವಿರುವುದರಿಂದ ಎಲ್ಡಿಎಫ್ ಮತ್ತು ಯುಡಿಎಫ್ಗಳು ಸಾಮಾನ್ಯ ಜನರ ವಿಶ್ವಾಸಾರ್ಹತೆ ಕಳೆದುಕೊಂಡಿವೆ ಎಂದರು.
140 ಸದಸ್ಯರ ಕೇರಳ ವಿಧಾನಸಭೆಯ ಚುನಾವಣೆ ಏಪ್ರಿಲ್ 6ರಂದು ಒಂದೇ ಹಂತದಲ್ಲಿ ನಡೆಯಲಿದ್ದು, ಮತ ಎಣಿಕೆ ಮೇ 2 ರಂದು ನಡೆಯಲಿದೆ.