ಕರ್ನಾಟಕ

karnataka

ETV Bharat / bharat

ಗುಜರಾತ್ ಬಿಜೆಪಿ ಅಭ್ಯರ್ಥಿ ಕಾರಿನ ಮೇಲೆ ದಾಳಿ, ತಲೆಗೆ ಗಾಯ - ETv Bharat kannada news

ಗುಜರಾತ್​ ವಿಧಾನಸಭೆ ಚುನಾವಣೆಯ ಮತದಾನಕ್ಕೂ ಮುನ್ನ ಬಿಜೆಪಿ ಅಭ್ಯರ್ಥಿಯೊಬ್ಬರ ಕಾರಿನ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ.

Piyush Patel is the candidate of BJP Vansda Constituency
ಬಿಜೆಪಿ ವಂಸ್ಡಾ ಕ್ಷೇತ್ರದ ಅಭ್ಯರ್ಥಿ ಪಿಯೂಷ್ ಪಟೇಲ್

By

Published : Dec 1, 2022, 9:16 AM IST

Updated : Dec 1, 2022, 10:10 AM IST

ಗುಜರಾತ್:ಗುಜರಾತ್ ವಿಧಾನಸಭೆ ಚುನಾವಣೆಗೆ ಇಂದು ಮೊದಲ ಹಂತದ ಮತದಾನ ನಡೆಯುತ್ತಿದೆ. 788 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಇದೇ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿಯೊಬ್ಬರ ಕಾರಿನ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ವನಸ್ಡಾ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿಯೂಷ್ ಪಟೇಲ್ ಕಳೆದ ರಾತ್ರಿ ಪ್ರತಾಪನಗರದಿಂದ ವಂಡರ್ವೇಲಾ ಕಡೆಗೆ ತೆರಳುತ್ತಿದ್ದಾಗ ಬೆಂಗಾವಲು ವಾಹನದ ಮೇಲೆ ದಾಳಿ ನಡೆದಿದೆ. ಕಾರಿನ ಗಾಜು ಒಡೆದು ಹಾಕಿದ್ದು, ಪಿಯೂಷ್ ಪಟೇಲ್ ಅವರ ತಲೆಗೆ ಗಾಯವಾಗಿದೆ.

ಈ ಘಟನೆ ಮತದಾನಕ್ಕೂ ಮುನ್ನ ನಡೆದಿದ್ದುಕಾಂಗ್ರೆಸ್ ಅಭ್ಯರ್ಥಿ ಅನಂತ್ ಪಟೇಲ್ ಅವರ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ. ಘಟನೆಯ ನಂತರ ವನಸ್ಡಾ ಪೊಲೀಸ್ ಠಾಣೆಯ ಹೊರಗೆ ಬಿಜೆಪಿ ಕಾರ್ಯಕರ್ತರು ಜಮಾಯಿಸಿ ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ:ಸಮಾಜದಲ್ಲಿ ಗಲಭೆ ಎಬ್ಬಿಸಲು ಬಿಜೆಪಿಗೆ ರೌಡಿಗಳು ಬೇಕು: ಸಿದ್ದರಾಮಯ್ಯ

Last Updated : Dec 1, 2022, 10:10 AM IST

ABOUT THE AUTHOR

...view details