ಹರಿದ್ವಾರ: ಬಿಜೆಪಿ ವಿರುದ್ಧ ಮತ್ತೊಮ್ಮೆ ತೀವ್ರ ವಾಗ್ದಾಳಿ ನಡೆಸಿದ ಭಾರತೀಯ ಕಿಸಾನ್ ಒಕ್ಕೂಟದ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್, ಚುನಾವಣೆಯ ನಂತರ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಪಕ್ಷವು 'ದಂಗಾ ಮಂತ್ರಿ' (ಹಿಂಸಾಚಾರ ಸಚಿವ) ಹುದ್ದೆಯನ್ನು ಸೃಷ್ಟಿಸಲಿದೆ ಎಂದು ಹೇಳಿದ್ದಾರೆ.
ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಆ ರೀತಿಯ ಮಂತ್ರಿ ಹುದ್ದೆ ರಚಿಸಲಾಗುವುದು ಎಂಬ ಬಗ್ಗೆ ಈಗಾಗಲೇ ನಾಗ್ಪುರದಿಂದ ಆದೇಶ ಬಂದಿದೆ. ಮುಂಬರುವ ದಿನಗಳಲ್ಲಿ ಅವರು (ದಂಗಾ ಮಂತ್ರಿ) ಸಿಎಂ ಅಡಿಯಲ್ಲಿ ಕೆಲಸ ಮಾಡುತ್ತಾರೆ. ಪರಿಣಾಮ ಗೃಹ ಸಚಿವರನ್ನು ಮೂರನೇ ಸ್ಥಾನಕ್ಕೆ ದೂಡಲಾಗುತ್ತದೆ ಎಂದಿದ್ದಾರೆ.