ಕರ್ನಾಟಕ

karnataka

ETV Bharat / bharat

ಗುವಾಹಟಿ ಮಹಾನಗರ ಪಾಲಿಕೆ ಮತ್ತೊಮ್ಮೆ ಬಿಜೆಪಿ ತೆಕ್ಕೆಗೆ; ಕಾಂಗ್ರೆಸ್‌ ಶೂನ್ಯ ಸಾಧನೆ

ಅಸ್ಸಾಂನ ಗುವಾಹಟಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಜಯ ದಾಖಲಿಸಿದೆ. 60 ವಾರ್ಡ್​ಗಳ ಪೈಕಿ 52 ಸ್ಥಾನ ಪಡೆದುಕೊಂಡಿದೆ. ಕಾಂಗ್ರೆಸ್​ ಶೂನ್ಯ ಸಾಧನೆ ಮಾಡಿದೆ.

By

Published : Apr 24, 2022, 5:20 PM IST

guwahati-municipal-corporation-election
ಗುವಾಹಟಿ ಮಹಾನಗರ ಪಾಲಿಕೆ ಮತ್ತೊಮ್ಮೆ ಬಿಜೆಪಿ ತೆಕ್ಕೆಗೆ

ಗುವಾಹಟಿ(ಅಸ್ಸಾಂ):ಗುವಾಹಟಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಏಕಸ್ವಾಮ್ಯದ ಗೆಲುವು ಸಾಧಿಸಿದೆ. 60 ವಾರ್ಡ್​ಗಳಿಗೆ ನಡೆದ ಚುನಾವಣೆಯಲ್ಲಿ 52 ಸ್ಥಾನಗಳನ್ನು ಬಿಜೆಪಿ ಪಡೆದರೆ, ಮಿತ್ರ ಪಕ್ಷವಾದ ಎಜಿಪಿ 6 ಸ್ಥಾನ ತನ್ನದಾಗಿಸಿಕೊಂಡಿತು. ಆಮ್ ಆದ್ಮಿ, ಅಸ್ಸಾಂ ಜಾತೀಯಾ ಪರಿಷತ್​ ತಲಾ 1 ಸ್ಥಾನ ಪಡೆದುಕೊಂಡಿವೆ. ಕಾಂಗ್ರೆಸ್ ಮುಖಭಂಗ ಅನುಭವಿಸಿದೆ.

ಈ ಅಭೂತಪೂರ್ವ ಗೆಲುವಿಗಾಗಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ ಮಾಡಿ, ಮತದಾರರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಇದಕ್ಕೆ ಶ್ರಮಿಸಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರನ್ನು ಅಭಿನಂದಿಸಿದ್ದಾರೆ.


ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಗುವಾಹಟಿಯಲ್ಲಿ ಸಂಭ್ರಮಾಚರಣೆ ನಡೆಸುತ್ತಿರುವುದು ಕಂಡುಬಂದಿದೆ. ಗುವಾಹಟಿ ಮಹಾನಗರ ಪಾಲಿಕೆಯ 60 ವಾರ್ಡ್‌ಗಳಿಗೆ ಏಪ್ರಿಲ್ 22 ರಂದು ಮತದಾನ ನಡೆದಿತ್ತು. ಇದರಲ್ಲಿ ಕಾಂಗ್ರೆಸ್ 54 ರಲ್ಲಿ ಸ್ಪರ್ಧಿಸಿದರೆ, ಬಿಜೆಪಿ 50, ಆಮ್ ಆದ್ಮಿ ಪಕ್ಷ 39 ಮತ್ತು ಅಸ್ಸಾಂ ರಾಷ್ಟ್ರೀಯ ಪರಿಷತ್ 25 ರಲ್ಲಿ ಸ್ಪರ್ಧಿಸಿತ್ತು.

ಇದನ್ನೂ ಓದಿ:ನೋಡಿ: ಮಹಾರಾಷ್ಟ್ರದಲ್ಲಿ ಎಟಿಎಂ ಎಗರಿಸಲು ಜೆಸಿಬಿ ತಂದ ದರೋಡೆಕೋರರು!

ABOUT THE AUTHOR

...view details