ದಿಸ್ಪುರ್ (ಅಸ್ಸೋಂ): ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ವಿಧಾನಸಭೆ ಚುನಾವಣೆ ನಡೆಯಲಿದೆ. ಈಗಾಗಲೇ ಐದೂ ವಿಧಾನಸಭೆಯ ಚುನಾವಣಾ ದಿನಾಂಕ ಕೂಡ ನಿಗದಿಯಾಗಿದೆ. ರಾಜಕೀಯ ಪಕ್ಷಗಳು ಗೆಲುವಿನ ನಗೆ ಬೀರಲು ರಣತಂತ್ರಗಳನ್ನು ಹೆಣೆಯುತ್ತಿವೆ.
ಈ ಬೆನ್ನಲ್ಲೇ ಬಿಜೆಪಿ ಅಸ್ಸೋಂ ಚುನಾವಣಾ ಅಖಾಡದಲ್ಲಿ ತನ್ನ ಸ್ಟಾರ್ ಪ್ರಚಾರಕರನ್ನು ನೇಮಿಸಿದೆ. ಒಂಬತ್ತು ಬಿಜೆಪಿ ನಾಯಕರನ್ನು ಚುನಾವಣಾ ಪ್ರಚಾರಕ್ಕಾಗಿ ನೇಮಿಸಲಾಗಿದೆ.
ಇದನ್ನೂ ಓದಿ:ಉತ್ತರಾಖಂಡದ ನೂತನ ಮುಖ್ಯಮಂತ್ರಿಯಾಗಿ ತಿರಥ್ ಸಿಂಗ್ ರಾವತ್ ಆಯ್ಕೆ
ಪಿಎಂ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಎನ್.ಎಸ್.ತೋಮರ್ ಮತ್ತು ಸ್ಮೃತಿ ಇರಾನಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್, ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಮಣಿಪುರ ಸಿಎಂ ಎನ್.ಬಿರೆನ್ ಸಿಂಗ್ ಅಸ್ಸೋಂನ ಬಿಜೆಪಿಯ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿದ್ದಾರೆ.
ಕಮಲ ಪಾಳಯದ ಸ್ಟಾರ್ ಪ್ರಚಾರಕರು ಇವರೇ