ಕರ್ನಾಟಕ

karnataka

ETV Bharat / bharat

ಮಿಥುನ್ ಚಕ್ರವರ್ತಿ ಭಾಗಿಯಾಗಬೇಕಿದ್ದ ರೋಡ್​ ಶೋಗೆ ಅನುಮತಿ ನಿರಾಕರಣೆ: ಪೊಲೀಸ್ ಠಾಣೆ ಮುಂದೆ ಹೈಡ್ರಾಮಾ - ರೋಡ್​ ಶೋ

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಹಾಗೂ ಬಿಜೆಪಿ ಅಬ್ಬರದ ಪ್ರಚಾರ ಮಾಡುತ್ತಿವೆ. ಈ ನಡುವೆ ಬಿಜೆಪಿ ಅಭ್ಯರ್ಥಿ ಪರ ನಡೆಸಬೇಕಿದ್ದ ರೋಡ್ ಶೋಗೆ ಅನುಮತಿ ನಿರಾಕರಿಸಿದ್ದರಿಂದ ಪೊಲೀಸ್ ಠಾಣೆ ಮುಂಭಾಗ ಹೈಡ್ರಾಮಾ ನಡೆದಿದೆ. ಮಿಥುನ್ ಚಕ್ರವರ್ತಿ ಭಾಗಿಯಾಗಲಿದ್ದ ರೋಡ್​​ ಶೋಗೆ ಪೊಲೀಸರು ಅನುಮತಿ ನಿರಾಕರಿಸಿದ್ದರು.

mithun-chakrabortys
ಮಿಥುನ್ ಚಕ್ರವರ್ತಿ

By

Published : Apr 8, 2021, 7:54 PM IST

ಕೋಲ್ಕತ್ತಾ (ಪ.ಬಂ): ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಕಾವು ಏರುತ್ತಿದ್ದು, ಎಲ್ಲಾ ಪಕ್ಷಗಳು ಅಬ್ಬರದ ಪ್ರಚಾರ ನಡೆಸುತ್ತಿವೆ. ಈ ನಡುವೆ ಬಿಜೆಪಿ ಅಭ್ಯರ್ಥಿ ಪರ ಮಿಥುನ್ ಚಕ್ರವರ್ತಿ ನಡೆಸಬೇಕಿದ್ದ ರೋಡ್ ಶೋಗೆ ಅನುಮತಿ ನಿರಾಕರಿಸಲಾಗಿದೆ.

ರೋಡ್ ಶೋಗೆ ಅನುಮತಿ ನಿರಾಕರಣೆ ಹಿನ್ನೆಲೆ ಇಲ್ಲಿನ ಪಾರ್ನಶ್ರೀ ಪೊಲೀಸ್ ಠಾಣೆಯ ಮುಂಭಾಗ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ.

ಬೆಹಲಾ ಪಾಸ್ಚಿಮ್ ಅಭ್ಯರ್ಥಿ ಶ್ರಬಂತಿ ಚಟರ್ಜಿಯನ್ನು ಬೆಂಬಲಿಸಿ ಚಕ್ರವರ್ತಿ ಇಂದು ರೋಡ್ ಶೋ ನಡೆಸಬೇಕಿತ್ತು. ಹಿರಿಯ ನಟ-ರಾಜಕಾರಣಿ ಮಿಥುನ್ ಚಕ್ರವರ್ತಿ ಮಾರ್ಚ್ 7ರಂದು ಕೋಲ್ಕತ್ತಾದ ಬ್ರಿಗೇಡ್ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ರ‍್ಯಾಲಿಯಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು.

ಮಿಥುನ್ ಎರಡು ವರ್ಷಗಳ ಕಾಲ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸಂಸದರಾಗಿದ್ದರು. ಶಾರದಾ ಚಿಟ್​​ ಫಂಡ್​ ಹಗರಣದಲ್ಲಿ ಅವರ ಹೆಸರು ಬೆಳಕಿಗೆ ಬಂದ ನಂತರ ಅನಾರೋಗ್ಯ ಕಾರಣ ಉಲ್ಲೇಖಿಸಿ ಅವರು 2016ರಲ್ಲಿ ಈ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ABOUT THE AUTHOR

...view details