ಭೋಪಾಲ್ (ಮಧ್ಯ ಪ್ರದೇಶ): ರಾಜಧಾನಿ ಭೋಪಾಲದ ಶಾಹಪುರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ಉಮಂಗ್ ಸಿಂಘಾರ ಅವರ ಬಂಗಲೆಯಲ್ಲಿ ಮಹಿಳೆವೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಹಿಳೆ ಬರೆದಿದ್ದ ಡೆತ್ ನೋಟ್ ಕೂಡ ಶಾಸಕನ ಮನೆಯಲ್ಲಿ ಸಿಕ್ಕಿದೆ.
ಕಾಂಗ್ರೆಸ್ ಶಾಸಕನ ಬಂಗಲೆಯಲ್ಲಿ ಮಹಿಳೆ ಆತ್ಮಹತ್ಯೆ! - ಪ್ರೇಮ ಪ್ರಕರಣ
ಭೋಪಾಲದ ಶಾಹಪುರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ಉಮಂಗ್ ಸಿಂಘಾರ ಅವರ ಬಂಗಲೆಯಲ್ಲಿ ಮಹಿಳೆಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮಹಿಳೆಯ ಸಾವಿನ ಕುರಿತಾಗಿ ಬಿಜೆಪಿಯ ನೇಹಾ ಬಗ್ಗಾ ವಿಡಿಯೋವೊಂದನ್ನು ಟ್ವೀಟ್ ಮಾಡಿದ್ದು, "ಮಹಿಳೆಯನ್ನು ಪ್ರೇಮಜಾಲದಲ್ಲಿ ಬೀಳಿಸಿ ಮೋಸ ಮಾಡಿರುವುದು ಡೆತ್ ನೋಟ್ನಿಂದ ಸ್ಪಷ್ಟವಾಗುತ್ತಿದೆ. ಜೀವನ ಪರ್ಯಂತ ಜೊತೆಯಾಗಿರುವುದಾಗಿ ಹೇಳಿ ಮೋಸ ಮಾಡಿರುವುದರಿಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಥವಾ ಅವಳು ಕೊಲೆಯಾಗಿರಲೂಬಹುದು" ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವವರು ಓರ್ವ ಮಹಿಳೆ. ಈಗ ಅವರೇಕೆ ಸುಮ್ಮನಿದ್ದಾರೆ, ಪ್ರತಿಯೊಂದು ವಿಷಯಕ್ಕೂ ಟ್ವೀಟ್ ಮಾಡುವ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಈ ವಿಷಯದಲ್ಲಿ ಮೌನವಾಗಿರುವುದೇಕೆ ಎಂದು ನೇಹಾ ಬಗ್ಗಾ ಪ್ರಶ್ನಿಸಿದ್ದಾರೆ.