ಕರ್ನಾಟಕ

karnataka

ETV Bharat / bharat

ಭಯೋತ್ಪಾದನೆ, ಲವ್​ ಜಿಹಾದ್​ ಬಗ್ಗೆ ಕೇರಳ ಸಿಎಂ ಮೌನ: ಆಕ್ರೋಶ ಹೊರಹಾಕಿದ ಬಿಜೆಪಿ - BJP slams Kerala CM

ಕೇರಳದಲ್ಲಿ ವ್ಯಾಪಕವಾಗಿರುವ ಭಯೋತ್ಪಾದನೆ ಬಗ್ಗೆ ಮುಖ್ಯಮಂತ್ರಿ ಏಕೆ ಮೌನ ವಹಿಸುತ್ತಿದ್ದಾರೆ? ಭಯೋತ್ಪಾದನೆ ಕೇರಳದ ಸಾಮಾಜಿಕ ರಚನೆಯ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತಿದೆ. ಮುಖ್ಯಮಂತ್ರಿ ಅವರು ಭಯೋತ್ಪಾದನೆ ಬಗ್ಗೆ ಏಕೆ ತನಿಖೆ ನಡೆಸುತ್ತಿಲ್ಲ? ಅವರು ಯಾರಿಗೆ ಹೆದರುತ್ತಾರೆ? ಎಂದು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಪಿ.ಕೆ.ಕೃಷ್ಣ ದಾಸ್ ವಾಗ್ದಾಳಿ ನಡೆಸಿದ್ದಾರೆ.

PK Krishna Das
ಕೃಷ್ಣ ದಾಸ್

By

Published : Sep 15, 2021, 12:12 PM IST

ಕೊಚ್ಚಿ( ಕೇರಳ): ರಾಜ್ಯದಲ್ಲಿ ನಡೆಯುತ್ತಿರುವ ಭಯೋತ್ಪಾದನೆ ಮತ್ತು ಲವ್ ಜಿಹಾದ್ ವಿಷಯದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮೌನ ವಹಿಸಿದ್ದಾರೆ ಎಂದು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಪಿ.ಕೆ.ಕೃಷ್ಣ ದಾಸ್ ವಾಗ್ದಾಳಿ ನಡೆಸಿದ್ದಾರೆ.

ಕೊಚ್ಚಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ದಾಸ್, "ಕೇರಳದಲ್ಲಿ ವ್ಯಾಪಕವಾಗಿರುವ ಭಯೋತ್ಪಾದನೆಯ ಬಗ್ಗೆ ಮುಖ್ಯಮಂತ್ರಿ ಏಕೆ ಮೌನ ವಹಿಸುತ್ತಿದ್ದಾರೆ? ಭಯೋತ್ಪಾದನೆಯು ಕೇರಳದ ಸಾಮಾಜಿಕ ರಚನೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಮುಖ್ಯಮಂತ್ರಿ ಅವರು ಭಯೋತ್ಪಾದನೆಯ ಬಗ್ಗೆ ಏಕೆ ತನಿಖೆ ನಡೆಸುತ್ತಿಲ್ಲ? ಅವರು ಯಾರಿಗೆ ಹೆದರುತ್ತಾರೆ? ಕೇರಳದಲ್ಲಿ ಭಯೋತ್ಪಾದನೆ ಮತ್ತು ಲವ್ ಜಿಹಾದ್ ಇಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಬೇಕು. ಮುಖ್ಯಮಂತ್ರಿಯವರು ಮಾತನಾಡಬೇಕು" ಎಂದು ಗುಡುಗಿದ್ದಾರೆ.

ಈ ಮೈತ್ರಿ ದೇಶಕ್ಕೆ ಮಾರಕ

"ಪಾಲಾ ಸಮೀಪದ ಈರಟ್ಟುಪೇಟೆ ಪುರಸಭೆಯಲ್ಲಿ ಎಡ-ಜಿಹಾದಿ ಮೈತ್ರಿ ನಿನ್ನೆ ಅಸ್ತಿತ್ವಕ್ಕೆ ಬಂದಿತು. ಎಸ್‌ಡಿಪಿಐ ಸದಸ್ಯರ ಸಹಾಯದಿಂದ ಸಿಪಿಐ-ಎಂ ಪುರಸಭೆಯನ್ನು ಆಳಲಿದೆ. ಇದು ಒಂದು ದಿನದ ಮೈತ್ರಿಯಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕೇರಳದಲ್ಲಿ ಮೈತ್ರಿ ಪುನರಾವರ್ತನೆಯಾಗುವ ಸಾಧ್ಯತೆಯಿದೆ.

ಈ ಮೈತ್ರಿಯು ದೇಶಕ್ಕೆ ಮಾರಕವಾಗಿದೆ. ಸಿಪಿಐ-ಎಂ ಭಯೋತ್ಪಾದನಾ ಸಂಘಟನೆಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಸಿಎಂ ಅವರ ಮೌನಕ್ಕೆ ನಿನ್ನೆ ಸ್ಪಷ್ಟನೆ ಸಿಕ್ಕಂತಾಗಿದೆ. ಅಖಿಲ ಭಾರತ ನಾಯಕತ್ವವು ಈ ಬಗ್ಗೆ ತನ್ನ ನಿಲುವು ತಿಳಿಸಬೇಕು. ಅವರು ಭಯೋತ್ಪಾದಕರೊಂದಿಗೆ ಇದ್ದರೆ, ಸಾರ್ವಜನಿಕವಾಗಿ ಹೇಳಬೇಕು" ಎಂದು ಒತ್ತಾಯಿಸಿದರು.

"ಭಯೋತ್ಪಾದಕರಿಗೆ ಯಾವುದೇ ಧರ್ಮವಿಲ್ಲ. ಆದರೆ,ಅವರು ಧರ್ಮದ ಕವಚವನ್ನು ಧರಿಸಿದ್ದಾರೆ. ಸಿಪಿಐ-ಎಂ ಮತ್ತು ಕಾಂಗ್ರೆಸ್ ಅದರ ಬಲೆಗೆ ಬಿದ್ದಿವೆ. ಭಯೋತ್ಪಾದನೆ ವಿರುದ್ಧ ಹೋರಾಡಲು ಎಲ್ಲಾ ಧರ್ಮಗಳು ಒಂದಾಗಬೇಕು. ಇದು ಎರಡು ಧರ್ಮಗಳ ನಡುವಿನ ಸಮಸ್ಯೆಯಲ್ಲ "ಎಂದು ಪಿ ಕೆ ಕೃಷ್ಣದಾಸ್​​ ಹೇಳಿದರು.

ABOUT THE AUTHOR

...view details