ಮುಂಬೈ:ಕಳೆದ ಕೆಲ ದಿನಗಳಿಂದ ಮಹಾರಾಷ್ಟ್ರದಲ್ಲಿನ ಶಿವಸೇನೆ-ಬಿಜೆಪಿ ನಡುವಿನ ರಾಜಕೀಯ ಬೆಳವಣಿಗೆ ಕುರಿತು ಹೆಚ್ಚು ಚರ್ಚೆಯಾಗುತ್ತಿದೆ. ಇದಕ್ಕೆ ಪೂರಕವಾಗಿ ಶಿವಸೇನೆ ವಕ್ತಾರ ಸಂಜಯ್ ರಾವತ್ ನೀಡಿರುವ ಹೇಳಿಕೆ ಇದೀಗ ಕುತೂಹಲ ಕೆರಳಿಸಿದೆ.
ಆಡಳಿತ ಪಕ್ಷದಲ್ಲಿರುವ ಶಿವಸೇನೆ ಹಾಗೂ ವಿರೋಧ ಪಕ್ಷದಲ್ಲಿರುವ ಬಿಜೆಪಿ ಕುರಿತು ಮಾತನಾಡಿರುವ ರಾವತ್, ಅಮೀರ್ ಖಾನ್- ಕಿರಣ್ ರಾವ್ ಸಂಬಂಧಕ್ಕೆ ಹೋಲಿಕೆ ಮಾಡಿದ್ದಾರೆ. ಎರಡು ಪಕ್ಷಗಳ ರಾಜಕೀಯ ವಿಚಾರ ಬೇರೆಯಾಗಿದ್ದು, ಆದರೆ ಸ್ನೇಹ ಮಾತ್ರ ಯಾವಾಗಲೂ ಒಂದೇ ಆಗಿರುತ್ತದೆ ಎಂದು ಅವರು ಹೇಳಿದರು
ಕಳೆದ ಎರಡು ದಿನಗಳ ಹಿಂದೆ ಶಿವಸೇನೆ-ಬಿಜೆಪಿ ವಿಚಾರವಾಗಿ ಮಾತನಾಡಿದ್ದ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಶಿವಸೇನೆ-ಬಿಜೆಪಿ ಶತ್ರುಗಳಲ್ಲ ಎಂದಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ಸಂಜಯ್ ರಾವತ್ ಈ ರೀತಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.