ಶಿಮ್ಲಾ:ಹಿಮಾಚಲಪ್ರದೇಶದಲ್ಲಿ ಮತದಾರ ತನ್ನ ಹಿಂದಿನ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುವಂತೆ ಕಾಣುತ್ತಿದೆ. 68 ವಿಧಾನಸಭಾ ಕ್ಷೇತ್ರಗಳ ಪೈಕಿ ಆರಂಭಿಕ ಫಲಿತಾಂಶದಲ್ಲಿ ಆಡಳಿತಾರೂಢ ಬಿಜೆಪಿಗಿಂತ ಕಾಂಗ್ರೆಸ್ ಮುನ್ನಡೆ ಸಾಧಿಸುತ್ತಿದೆ. 34 ಸ್ಥಾನಗಳಲ್ಲಿ ಕೈ ಪಕ್ಷ ಮುಂದಿದ್ದರೆ, ಬಿಜೆಪಿ 33 ಸ್ಥಾನಗಳಲ್ಲಿ ಮುನ್ನುಗ್ಗುತ್ತಿದೆ. ಆಪ್ ಪ್ರಭಾವ ಇಲ್ಲಿ ಇಲ್ಲವಾಗಿದೆ.
ಹಿಮಾಚಲಪ್ರದೇಶದಲ್ಲಿ 1985 ರಿಂದಲೂ ಇಲ್ಲಿನ ಜನರು ಯಾವುದೇ ಪಕ್ಷಕ್ಕೆ ಎರಡನೇ ಬಾರಿಗೆ ಅಧಿಕಾರ ನೀಡಿಲ್ಲ. ಈ ಬಾರಿ ಬಿಜೆಪಿ ಈ ದಾಖಲೆ ಮುರಿಯಲಿದೆ ಎಂದೇ ಭಾವಿಸಲಾಗಿತ್ತು. ಆದರೆ, ಮತದಾರ ತನ್ನ ಕರಾಮತ್ತು ಮುಂದುವರಿಸಿದ್ದು, ಕಾಂಗ್ರೆಸ್ ಪರ ವಾಲಿರುವ ಸಾಧ್ಯತೆ ಇದೆ.