ಕರ್ನಾಟಕ

karnataka

ETV Bharat / bharat

ಗುಜರಾತ್​​ನಲ್ಲಿ​ 6 ಮುನ್ಸಿಪಾಲ್​ ಕ್ಲೀನ್​ ಸ್ವೀಪ್​ ಮಾಡಿದ ಬಿಜೆಪಿ: ​​576ರ ಪೈಕಿ 483ಸ್ಥಾನಗಳಲ್ಲಿ ಅರಳಿದ 'ಕಮಲ': ನಮೋ ಹರ್ಷ​!

ಗುಜರಾತ್​ನ ಆರು ಮುನ್ಸಿಪಾಲ್​ ಕಾರ್ಪೋರೇಷನ್​ಗಳಿಗೆ ನಡೆದಿದ್ದ​ ಚುನಾವಣೆ ಫಲಿತಾಂಶ ಇಂದು ಬಹಿರಂಗಗೊಂಡಿದ್ದು, ಭಾರತೀಯ ಜನತಾ ಪಾರ್ಟಿ ಕ್ಲೀನ್​ ಸ್ವೀಪ್ ಮಾಡಿದೆ.

Gujarat municipal corporations
Gujarat municipal corporations

By

Published : Feb 23, 2021, 7:57 PM IST

Updated : Feb 23, 2021, 9:50 PM IST

ಅಹಮದಾಬಾದ್​(ಗುಜರಾತ್​): ಗುಜರಾತ್​ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಭರ್ಜರಿ ಜಯಭೇರಿ ಬಾರಿಸಿ, ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಒಟ್ಟು 576 ಸ್ಥಾನಗಳ ಪೈಕಿ ಬಿಜೆಪಿ 483 ಸ್ಥಾನ, ಕಾಂಗ್ರೆಸ್​ 55 ಹಾಗೂ ಎಎಪಿ 27 ಸ್ಥಾನಗಳಲ್ಲಿ ಗೆಲುವು ದಾಖಲು ಮಾಡಿದ್ದು, ಇತರೆ 04 ಸ್ಥಾನಗಳಲ್ಲಿ ಗೆದ್ದಿದೆ. ಆರು ಮುನ್ಸಿಪಾಲ್​ ಕಾರ್ಪೋರೇಷನ್​ಗಳಾದ ಅಹಮದಾಬಾದ್​, ಸೂರತ್, ರಾಜಕೋಟ್​, ವಡೋದರಾ, ಬಾವಾನಗರ ಹಾಗೂ ಜಾಮ್​ನಗರದಲ್ಲಿ 144 ವಾರ್ಡ್​ಗಳ 576 ಸ್ಥಾನಗಳಿಗಾಗಿ ಫೆ. 21ರಂದು ಚುನಾವಣೆ ನಡೆದಿತ್ತು.

ಆರು ಮುನ್ಸಿಪಾಲ್​ಗಳಲ್ಲಿ ಬಿಜೆಪಿ ಜಯಭೇರಿ, ಕ್ಲೀನ್​ ಸ್ವೀಪ್​ ಸಾಧನೆ

  • ಬಾವಾನಗರ: 52 ಸ್ಥಾನಗಳ ಪೈಕಿ ಬಿಜೆಪಿ 44, ಕಾಂಗ್ರೆಸ್​​ 8 ಸ್ಥಾನಗಳಲ್ಲಿ ಗೆಲುವು
  • ಸೂರತ್​: 120 ಸ್ಥಾನಗಳ ಪೈಕಿ ಬಿಜೆಪಿ 93, ಎಎಪಿ 27 ಸ್ಥಾನಗಳಲ್ಲಿ ಜಯ
  • ವಡೋದರಾ76 ಸ್ಥಾನಗಳಲ್ಲಿ ಬಿಜೆಪಿ 69 ಹಾಗೂ ಕಾಂಗ್ರೆಸ್ 7ರಲ್ಲಿ ಜಯಭೇರಿ
  • ಜಾಮ್​ನಗರ64ರ ಪೈಕಿ ಬಿಜೆಪಿ 50 ಸ್ಥಾನ ಹಾಗೂ ಕಾಂಗ್ರೆಸ್​ 11ರಲ್ಲಿ ಗೆಲುವು
  • ರಾಜ್​ಕೋಟ್​ 72 ಸ್ಥಾನಗಳ ಪೈಕಿ ಬಿಜೆಪಿ 68 ಹಾಗೂ ಕಾಂಗ್ರೆಸ್​ 4 ಸ್ಥಾನಗಳಲ್ಲಿ ಜಯ
  • ಅಹಮದಾಬಾದ್​ 192 ಸ್ಥಾನಗಳಲ್ಲಿ ಬಿಜೆಪಿ 161, ಕಾಂಗ್ರೆಸ್​ 15 ಹಾಗೂ ಎಐಎಂಐಎಂ 7ರಲ್ಲಿ ಗೆಲುವು

ಇದನ್ನೂ ಓದಿ: ಕುಡಿದ ನಶೆಯಲ್ಲಿ ಏಳು ತಿಂಗಳ ಮಗುವಿನ ಕೊಲೆ ಮಾಡಿದ ಪಾಪಿ ತಂದೆ!

ಗುಜರಾತ್ ಮಹಾನಗರ ಪಾಲಿಕೆಯಲ್ಲಿ ಇದೇ ಮೊದಲ ಸಲ ಸ್ಪರ್ಧೆ ಮಾಡಿದ್ದ ಆಮ್​ ಆದ್ಮಿ ಭರ್ಜರಿ ಗೆಲುವು ದಾಖಲು ಮಾಡಿದ್ದು, ಇದರಿಂದ ಖುಷಿ ಆಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಅಭಿನಂದನೆ ಸಲ್ಲಿಕೆ ಮಾಡಿ ಟ್ವೀಟ್ ಮಾಡಿದ್ದಾರೆ. ಜತೆಗೆ ಫೆ. 26ರಂದು ಸೂರತ್​ನಲ್ಲಿ ರೋಡ್ ಶೋ ನಡೆಸುವುದಾಗಿ ಹೇಳಿದ್ದಾರೆ.

ಟ್ವೀಟ್ ಮಾಡಿದ ಮೋದಿ, ಅಮಿತ್ ಶಾ

ಗುಜರಾತ್ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲು ಮಾಡುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದು, ಬಿಜೆಪಿ ಮೇಲೆ ನಂಬಿಕೆ ಇಟ್ಟು ಗೆಲುವು ದಾಖಲು ಮಾಡಲು ಮತ ಹಾಕಿದ್ದಕ್ಕೆ ಧನ್ಯವಾದಗಳು. ಬಿಜೆಪಿಯ ಅದ್ಭುತ ಪ್ರದರ್ಶನಕ್ಕಾಗಿ ಗುಜರಾತ್​ ಜನರಿಗೆ ಧನ್ಯವಾದಗಳು ಎಂದಿರುವ ಅವರು, ಗುಜರಾತ್ ಸರ್ಕಾರದ ಜನ ಪರ ನೀತಿಗಳು ಇಡೀ ರಾಜ್ಯದ ಮೇಲೆ ಧನಾತ್ಮಕ ಪರಿಣಾಮ ಬೀರಿವೆ ಎಂದಿದ್ದಾರೆ. ಇದೇ ವೇಳೆ, ಬಿಜೆಪಿಯ ಪ್ರತಿಯೊರ್ವ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತಿರುವುದಾಗಿ ನಮೋ ಟ್ವೀಟ್ ಮಾಡಿದ್ದಾರೆ.

ಅಮಿತ್ ಶಾ ಟ್ವೀಟ್

ಗುಜರಾತ್​ ಭಾಷೆಯಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದು, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಯ ಅಭಿವೃದ್ಧಿ ಮತ್ತು ಪ್ರಗತಿಯ ಸಂಕೇತ ನಂಬಿದ್ದಕ್ಕಾಗಿ ನಾನು ಗುಜರಾತ್ ಜನರಿಗೆ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದು ಶಾ ಹೇಳಿದ್ದಾರೆ.

Last Updated : Feb 23, 2021, 9:50 PM IST

ABOUT THE AUTHOR

...view details