ಕರ್ನಾಟಕ

karnataka

ETV Bharat / bharat

ಗನ್​ಮ್ಯಾನ್​ ಟೀ ಕುಡಿಯಲು ಹೋದಾಗ ಬಿಜೆಪಿ ಎಸ್‌ಸಿ-ಎಸ್‌ಟಿ ವಿಭಾಗದ ಮುಖಂಡನ ಕೊಲೆ - ಬಿಜೆಪಿಯ ಎಸ್​ಸಿ ಎಸ್​ಟಿ ವಿಭಾಗದ ಮುಖಂಡನ ಕೊಲೆ

ಚೆನ್ನೈನ ಚಿಂತದ್ರಿಪೇಟ್​ನಲ್ಲಿ ಬಾಲಚಂದರ್ ವಾಸವಿದ್ದರು. ಇದೇ ಪ್ರದೇಶದ ನಿವಾಸಿಗಳಾದ ಮೋಹನ್​ ಮತ್ತು ಈತನ ಮಗ ಪ್ರದೀಪ್​ ಎಂಬುವವರೊಂದಿಗೆ ಕಲಹ ಉಂಟಾಗಿತ್ತು. ಅಲ್ಲದೇ, ಬಾಲಚಂದರ್ ಅವರಿಗೆ ಜೀವ ಬೆದರಿಕೆ ಸಹ ಇತ್ತು ಎನ್ನಲಾಗಿದೆ.

BJP Leader Balachandar killed in Chenna
ಚೆನ್ನೈನಲ್ಲಿ ಬಿಜೆಪಿಯ ಮುಖಂಡನ ಹತ್ಯೆ

By

Published : May 25, 2022, 1:29 PM IST

ಚೆನ್ನೈ (ತಮಿಳುನಾಡು): ತಮಿಳುನಾಡಿನ ಚೆನ್ನೈನಲ್ಲಿ ಬಿಜೆಪಿಯ ಎಸ್​ಸಿ-ಎಸ್​ಟಿ ವಿಭಾಗದ ಜಿಲ್ಲಾ ಕಾರ್ಯದರ್ಶಿ ಬಾಲಚಂದರ್​ (34) ಅವರನ್ನು ಕೊಲೆ ಮಾಡಲಾಗಿದೆ. ಯಾವುದೋ ಕಲಹದ ಕಾರಣದಿಂದ ಆರು ಜನರು ಸೇರಿಕೊಂಡು ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಇಲ್ಲಿನ ಚಿಂತದ್ರಿಪೇಟ್​ನಲ್ಲಿ ಬಾಲಚಂದರ್ ವಾಸವಿದ್ದರು. ಇದೇ ಪ್ರದೇಶದ ನಿವಾಸಿಗಳಾದ ಮೋಹನ್​ ಮತ್ತು ಈತನ ಮಗ ಪ್ರದೀಪ್​ ಎಂಬುವವರೊಂದಿಗೆ ಕಲಹ ಉಂಟಾಗಿತ್ತು. ಅಲ್ಲದೇ, ಬಾಲಚಂದರ್ ಅವರಿಗೆ ಜೀವ ಬೆದರಿಕೆಯೂ ಇತ್ತು. ಹೀಗಾಗಿ​ ತಮಗೆ ಪೊಲೀಸ್​ ಭದ್ರತೆ ಬೇಕೆಂದು ಅಧಿಕಾರಿಗಳಲ್ಲಿ ಮನವಿ ಮಾಡಿದ್ದರು. ಅಂತೆಯೇ ಅವರಿಗೆ ಗನ್‌ಮ್ಯಾನ್‌ ಒದಗಿಸಲಾಗಿದೆ. ಆದರೆ, ಈ ಗನ್‌ಮ್ಯಾನ್ ಟೀ ಕುಡಿಯಲೆಂದು ಹೋದಾಗ ಬಾಲಚಂದರ್​ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ.


ಈ ಬಗ್ಗೆ ಪ್ರತಿಕ್ರಿಯಿಸಿರುವ ಚೆನ್ನೈ ಪೊಲೀಸ್​ ಆಯುಕ್ತ ಶಂಕರ್​ ಜಿವಾಲ್​, ಹಳೆಯ ವೈಷಮ್ಯದಿಂದ ಬಾಲಚಂದರ್ ಕೊಲೆಯಾಗಿದೆ. ಈ ಬಗ್ಗೆ ಪ್ರತ್ಯಕ್ಷದರ್ಶಿಗಳಿಂದಲೂ ಮಾಹಿತಿ ಕಲೆ ಹಾಕುತ್ತಿದ್ದೇವೆ. ಕೊಲೆ ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದರು. ಇತ್ತ, ಧಾರ್ಮಿಕ ವಿಷಯಗಳಿಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ಗಳನ್ನು ಬಾಲಚಂದರ್​ ಹಾಕುತ್ತಿದ್ದರು. ಈ ಸಂಬಂಧ ಕೂಡ ಅವರಿಗೆ ಜೀವ ಬೆದರಿಕೆಗಳು ಬಂದಿದ್ದವು ಎನ್ನಲಾಗುತ್ತಿದೆ.

ಇದನ್ನೂ ಓದಿ:ಜಮ್ಮು-ಕಾಶ್ಮೀರದಲ್ಲಿ ಗುಂಡಿನ ಕಾಳಗ : ಮೂವರು ಪಾಕಿಸ್ತಾನಿ ಉಗ್ರರ ಎನ್​ಕೌಂಟರ್​

ABOUT THE AUTHOR

...view details