ನವದೆಹಲಿ :ದೆಹಲಿ ಹಿಂಸಾಚಾರ ಸಂಬಂಧ ಪ್ರತಿಕ್ರಿಯಿಸಿರುವ ಬಿಜೆಪಿರಾಜ್ಯಸಭಾ ಸದಸ್ಯಸುಬ್ರಮಣಿಯನ್ ಸ್ವಾಮಿ, ತಮ್ಮ ಪಕ್ಷದ ಸದಸ್ಯರಿಗೆ ಎಚ್ಚರದಿಂದ ಇರುವಂತೆ ಕಿವಿಮಾತು ಹೇಳಿದ್ದಾರೆ.
ಬುಧವಾರ ಬೆಳಗ್ಗೆ ಸರಣಿ ಟ್ವೀಟ್ ಮಾಡಿದ ಅವರು, ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಕಠಿಣ ವ್ಯಕ್ತಿತ್ವ ಚಿತ್ರಣ ಹೊಂದಿದ್ದು, ಅವರ ಮೇಲಿನ ಗೌರವ ಕಳೆದುಹೋಗಿದೆ ಎಂದು ಬರೆದುಕೊಂಡಿದ್ದಾರೆ.
ರೈತರ ಆಂದೋಲನದಲ್ಲಿ ಕೃಷಿ ವ್ಯಾಪಾರದ ಮಧ್ಯಸ್ಥಗಾರರ ಎರಡು ಗುಂಪುಗಳ ಗೌರವವು ಇಲ್ಲಿಯವರೆಗೆ ಕಳೆದುಹೋಗಿದೆ. ಮೊದಲು ಪಂಜಾಬ್ ಕಾಂಗ್ರೆಸ್/ಅಕಾಲಿದಳ ರಾಜಕಾರಣಿಗಳು ಮತ್ತು ಅವರ ಮಧ್ಯವರ್ತಿಗಳದ್ದು.
ಎರಡನೆಯದಾಗಿ ಮೋದಿ/ಶಾ ಅವರ ಕಠಿಣ ವ್ಯಕ್ತಿತ್ವದ ಚಿತ್ರಣದಿಂದ ಗೌರವ ಕಳೆದೋಗಿದೆ. ಇದರ ಲಾಭ ಗಳಿಸುವವರು ನಕ್ಸಲ್ಸ್, ಡ್ರಗ್ ದಣಿಗಳು, ಐಎಸ್ಐ ಮತ್ತು ಖಲಿಸ್ತಾನಿಗಳು. ಬಿಜೆಪಿಯವರೇ ದಯವಿಟ್ಟು ಎಚ್ಚರಗೊಳ್ಳಿ ಎಂದು ಬರೆದುಕೊಂಡಿದ್ದಾರೆ.
ಗಣರಾಜ್ಯೋತ್ಸವದ ಆಚರಣೆಯಲ್ಲಿನ ಕಾನೂನು ಮತ್ತು ಸುವ್ಯವಸ್ಥೆಯ ವೈಫಲ್ಯವನ್ನು ಉಲ್ಲೇಖಿಸಿ 'ಈ ವರ್ಷ ರಾಷ್ಟ್ರಪತಿ ಭವನದಲ್ಲಿ ಕಾರ್ಯಕ್ರಮ ನಡೆಸಬೇಕು' ಎಂದು ನಾನು ಸೂಚಿಸಿದ್ದೆ. ಭಾರತವನ್ನು ಮತ್ತಷ್ಟು ಸ್ಥಿರಗೊಳಿಸಲು ಈ ಮಾರ್ಚ್-ಮೇ ಅವಧಿಯಲ್ಲಿ ಚೀನಾ ಒಂದು ದೊಡ್ಡ ದಾಳಿ ನಡೆಸಲು ಸಾಕಾರಗೊಂಡಿದೆ. ಹಿಂದೂಗಳು ದಿಗ್ಭಧನದಿಂದ ಎದ್ದೇಳಿ ಎಂದು ಬರೆದುಕೊಂಡಿದ್ದಾರೆ.