ನವದೆಹಲಿ: ಮುಂದಿನ ವರ್ಷದ ಮೊದಲಾರ್ಧದಲ್ಲಿ ಗೋವಾ, ಮಣಿಪುರ, ಪಂಜಾಬ್, ಉತ್ತರಾಖಂಡ ಮತ್ತು ಉತ್ತರಪ್ರದೇಶದ ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಈ ಎಲ್ಲಾ ರಾಜ್ಯಗಳಿಗೆ ಪಕ್ಷದ ಉಸ್ತುವಾರಿಗಳನ್ನು ಇಂದು ಪ್ರಕಟಿಸಿದ್ದಾರೆ.
ಉತ್ತರ ಪ್ರದೇಶಕ್ಕೆ ಪ್ರಧಾನ್:
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಉಸ್ತುವಾರಿಯಾಗಿ ನೇಮಿಸಲಾಗಿದೆ. ಕೇಂದ್ರ ಸಚಿವರಾದ ಅನುರಾಗ್ ಠಾಕೂರ್, ಅರ್ಜುನ್ ರಾಮ್ ಮೇಘ್ವಾಲ್, ಶೋಭಾ ಕರಂದ್ಲಾಜೆ ಮತ್ತು ಅನ್ನಪೂರ್ಣ ದೇವಿ, ರಾಜ್ಯಸಭಾ ಸಂಸದರಾದ ಸರೋಜ್ ಪಾಂಡೆ ಮತ್ತು ವಿವೇಕ್ ಠಾಕೂರ್ ಮತ್ತು ಹರಿಯಾಣದ ಮಾಜಿ ಸಚಿವ ಕ್ಯಾಪ್ಟನ್ ಅಭಿಮನ್ಯು ಅವರನ್ನು ಉತ್ತರ ಪ್ರದೇಶದ ಸಹ-ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ.
ಉತ್ತರ ಪ್ರದೇಶಕ್ಕೆ ಬಿಜೆಪಿ ಪ್ರಾದೇಶಿಕ ಉಸ್ತುವಾರಿಗಳನ್ನು ಕೂಡ ನೇಮಿಸಿದೆ. ಪಶ್ಚಿಮ ಉತ್ತರ ಪ್ರದೇಶಕ್ಕೆ ಲೋಕಸಭಾ ಸಂಸದ ಸಂಜಯ್ ಭಾಟಿಯಾ, ಬ್ರಿಜ್ನ ಉಸ್ತುವಾರಿಯಾಗಿ ಬಿಹಾರದ ಶಾಸಕ ಸಂಜೀವ್ ಚೌರಾಸಿಯಾ, ಅವಧ್ ಉಸ್ತುವಾರಿಯಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವೈ.ಸತ್ಯ ಕುಮಾರ್, ಕಾನ್ಪುರದ ಉಸ್ತುವಾರಿಯಾಗಿ ಪಕ್ಷದ ಜಂಟಿ ಖಜಾಂಚಿ ಸುಧೀರ್ ಗುಪ್ತಾ, ಗೋರಖಪುರಕ್ಕೆ ರಾಷ್ಟ್ರೀಯ ಕಾರ್ಯದರ್ಶಿ ಅರವಿಂದ ಮೆನನ್, ಕಾಶಿಗೆ ಪಕ್ಷದ ರಾಜ್ಯ ವ್ಯವಹಾರಗಳ ಸಹ-ಉಸ್ತುವಾರಿ ಸುನಿಲ್ ಓಜಾ ಅವರ ಹೆಗಲಿಗೆ ಉಸ್ತುವಾರಿ ಜವಾಬ್ದಾರಿ ಬಿದ್ದಿದೆ.
ಪಂಜಾಬ್‌ಗೆ ಗಜೇಂದ್ರ ಸಿಂಗ್ ಶೇಖಾವತ್:
ಪಂಜಾಬ್ ವಿಧಾನಸಭಾ ಚುನಾವಣೆಗೆ, ಬಿಜೆಪಿ ಕೇಂದ್ರ ಜಲಶಕ್ತಿ ಖಾತೆ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಪಕ್ಷದ ಉಸ್ತುವಾರಿಯಾಗಿ ನೇಮಿಸಲಾಗಿದೆ. ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, ರಾಜ್ಯ ಸಚಿವ ಮೀನಾಕ್ಷಿ ಲೇಖಿ ಮತ್ತು ಲೋಕಸಭಾ ಸಂಸದ ವಿನೋದ್ ಚಾವ್ಡಾ ಅವರನ್ನು ರಾಜ್ಯಕ್ಕೆ ಸಹ-ಉಸ್ತುವಾರಿಯಾಗಿದ್ದಾರೆ.
ಮಣಿಪುರದ ಉಸ್ತುವಾರಿ ಭೂಪೇಂದ್ರ ಯಾದವ್ ಹೆಗಲಿಗೆ: