ಚಿತ್ರಕೂಟ (ಉತ್ತರ ಪ್ರದೇಶ): ಬಿಜೆಪಿ ಸಂಸದ ವಿನೋದ್ ಸೋಂಕರ್ ಅವರು ಸಮಾಜವಾದಿ ಪಕ್ಷದ (ಎಸ್ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು 'ಅತ್ಯಾಚಾರಿ' ಎಂದು ಕರೆದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಉತ್ತರ ಪ್ರದೇಶದ ಚಿತ್ರಕೂಟದ ರಾಜಾಪುರದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ವಿನೋದ್ ಸೋಂಕರ್, ಎಸ್ಪಿ ಮುಖಂಡನ ವಿರುದ್ಧ ಹರಿಹಾಯ್ದರು. "ಅಖಿಲೇಶ್ ಯಾದವ್ ಸಮಾಜವಾದಿಯೂ ಅಲ್ಲ, ಅಂಬೇಡ್ಕರ್ವಾದಿಯೂ ಅಲ್ಲ, ಅವರು ಕೇವಲ ನಮಾಜ್ವಾದಿ ಮಾತ್ರ. ಅಖಿಲೇಶ್ ಒಬ್ಬ ಜಾತಿವಾದಿ, ಕುಟುಂಬವಾದಿ, ಭ್ರಷ್ಟ ಮತ್ತು ಬಲತ್ಕಾರಿ (ಅತ್ಯಾಚಾರಿ)" ಎಂದು ಹೇಳಿಕೆ ನೀಡಿದ್ದಾರೆ.