ಕರ್ನಾಟಕ

karnataka

ETV Bharat / bharat

ಬಿಜೆಪಿ ಸಂಸದ ವರುಣ್​ ಗಾಂಧಿಗೆ ಕೋವಿಡ್ ಸೋಂಕು - ಉತ್ತರ ಪ್ರದೇಶದಲ್ಲಿ ಕೊರೊನಾ ಸೋಂಕು

ಬಿಜೆಪಿ ಸಂಸದ ವರುಣ್ ಗಾಂಧಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು, ಶೀಘ್ರ ಚೇತರಿಕೆಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾರೈಸಿದ್ದಾರೆ.

BJP MP Varun Gandhi Tests covid Positive
Varun Gandhi Positive: ಬಿಜೆಪಿ ಸಂಸದ ವರುಣ್​ ಗಾಂಧಿಗೆ ಕೋವಿಡ್ ಪಾಸಿಟಿವ್

By

Published : Jan 9, 2022, 11:39 AM IST

ಪಿಲಿಭಿತ್(ಉತ್ತರ ಪ್ರದೇಶ): ಬಿಜೆಪಿ ಸಂಸದ ವರುಣ್ ಗಾಂಧಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು, ಐಸೋಲೇಷನ್​​ಗೆ ಒಳಪಟ್ಟಿದ್ದಾರೆ. ಜನವರಿ 5 ಮತ್ತು 6ರಂದು ಎರಡು ದಿನಗಳ ಕಾಲ ಸ್ವಕ್ಷೇತ್ರದ ಗ್ರಾಮಗಳಲ್ಲಿ ಜನಸಂಪರ್ಕ ಸಭೆ ನಡೆಸಿ, ಪ್ರಚಾರ ಮಾಡಿದ್ದರು.

ಪಿಲಿಭಿತ್‌ಗೆ ಎರಡು ದಿನಗಳ ಭೇಟಿಯ ನಂತರ ವರುಣ್ ಗಾಂಧಿ ದೆಹಲಿ ತೆರಳಿದ್ದು, ಹಿಂದಿರುಗಿದ ನಂತರ ಮುಂಜಾಗ್ರತಾ ಕ್ರಮವಾಗಿ ಕೋವಿಡ್ ಪರೀಕ್ಷೆ ಮಾಡಿಸಿದ್ದರು. ಇದೀಗ ವರದಿಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ.

ಸೋಂಕು ತಗುಲಿರುವ ಸುದ್ದಿ ತಿಳಿದ ನಂತರ ಸಂಸದನ ಬೆಂಬಲಿಗರು ಸೇರಿದಂತೆ ಹಲವರು ಸಾಮಾಜಿಕ ಜಾಲತಾಣದಲ್ಲಿ ಶೀಘ್ರ ಚೇತರಿಕೆಗೆ ಹಾರೈಸುತ್ತಿದ್ದಾರೆ.

ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು, ಏಳು ಹಂತಗಳಲ್ಲಿ ಉತ್ತರ ಪ್ರದೇಶದಲ್ಲಿ ಚುನಾವಣೆ ನಡೆಯಲಿದೆ. ಫೆಬ್ರವರಿ 10ರಂದು ಮೊದಲ ಹಂತದ ಮತದಾನ ಆರಂಭವಾಗಲಿದೆ. ಕೊನೆಯ ಹಂತ ಮಾರ್ಚ್​ 7ರಂದು ನಡೆಯಲಿದ್ದು, ಮಾರ್ಚ್ 10ರಂದು ಫಲಿತಾಂಶ ಹೊರಬರಲಿದೆ.

ಇದನ್ನೂ ಓದಿ:ದೇಶದಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಸೋಂಕಿತರು ಪತ್ತೆ: ಒಮಿಕ್ರಾನ್​ನಲ್ಲಿ ಕರ್ನಾಟಕಕ್ಕೆ 3ನೇ ಸ್ಥಾನ

ABOUT THE AUTHOR

...view details