ಕರ್ನಾಟಕ

karnataka

ETV Bharat / bharat

ಕೇಂದ್ರದ ಮಾಜಿ ಸಚಿವ ರತನ್ ಲಾಲ್ ಕಟಾರಿಯಾ (72) ನಿಧನ - ಕೇಂದ್ರದ ಮಾಜಿ ಸಚಿವ ರತನ್ ಲಾಲ್

ಕೇಂದ್ರದ ಮಾಜಿ ಸಚಿವ ರತನ್​ ಲಾಲ್​ ಕಟಾರಿಯಾ ಅವರು ಇಂದು ಬೆಳಗ್ಗೆ ನಿಧನರಾದರು. ಅವರು ನ್ಯುಮೋನಿಯಾದಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.

ರತನ್ ಲಾಲ್ ಕಟಾರಿಯಾ ನಿಧನ
ರತನ್ ಲಾಲ್ ಕಟಾರಿಯಾ ನಿಧನ

By

Published : May 18, 2023, 8:59 AM IST

ಚಂಡೀಗಢ:ಹರಿಯಾಣದ ಅಂಬಾಲಾದ ಮೂರು ಬಾರಿ ಬಿಜೆಪಿ ಸಂಸದ ಮತ್ತು ಕೇಂದ್ರದ ಮಾಜಿ ಸಚಿವ ರತನ್ ಲಾಲ್ ಕಟಾರಿಯಾ ಅವರು ಗುರುವಾರ ಇಲ್ಲಿನ ಪಿಜಿಐ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು. ಕಳೆದ ಕೆಲ ದಿನಗಳಿಂದ ನ್ಯುಮೋನಿಯಾ ರೋಗಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದರು.

ಕಟಾರಿಯಾ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ನೊಂದಿಗೆ ನಿಕಟ ಸಂಬಂಧ ಹೊಂದಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಜಲಶಕ್ತಿ ಮತ್ತು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವರಾಗಿದ್ದ ಕಟಾರಿಯಾ ಅವರು ಎರಡು ವರ್ಷಗಳ ಕಾಲ ಸೇವೆಯ ಬಳಿಕ 2021 ರ ಜುಲೈನಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

2019 ರ ಲೋಕಸಭಾ ಚುನಾವಣೆಯಲ್ಲಿ ಕಟಾರಿಯಾ ಅವರು ಅಂಬಾಲಾ (ಮೀಸಲು) ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಚುನಾವಣೆಯಲ್ಲಿ ಪ್ರಸ್ತುತ ಹರಿಯಾಣ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆಯಾಗಿರುವ ಕುಮಾರಿ ಸೆಲ್ಜಾ ಅವರನ್ನು ಸುಮಾರು 3.42 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದರು.

ಇದಕ್ಕೂ ಮೊದಲು, ಅವರು 1999 ಮತ್ತು 2014 ರಲ್ಲಿ ಅಂಬಾಲಾ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದರು. ಅವರು 2004 ಮತ್ತು 2009 ರ ಲೋಕಸಭೆ ಚುನಾವಣೆಯಲ್ಲಿ ಕುಮಾರಿ ಸೆಲ್ಜಾ ಅವರಿಂದಲೇ ಎರಡು ಬಾರಿ ಸೋಲು ಅನುಭವಿಸಿದ್ದರು.

ರತನ್​ ಲಾಲಾ ಕಟಾರಿಯಾ ಅವರ ನಿಧನಕ್ಕೆ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮತ್ತು ಸ್ಪೀಕರ್ ಜಿಯಾನ್ ಚಂದ್ ಗುಪ್ತಾ ಅವರು ಸಂತಾಪ ಸೂಚಿಸಿದ್ದು, ಪಂಚಕುಲದಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.

ಸಿಎಂ ಮನೋಹರ್​ ಲಾಲ್​ ಸಂತಾಪ:ಕೇಂದ್ರದ ಮಾಜಿ ರಾಜ್ಯ ಸಚಿವ ಮತ್ತು ಅಂಬಾಲಾದ ಸಂಸದ ರತನ್ ಲಾಲ್ ಕಟಾರಿಯಾ ಅವರ ನಿಧನದಿಂದ ನಾನು ತೀವ್ರ ದುಃಖಿತನಾಗಿದ್ದೇನೆ. ಅವರು ಸಮಾಜದ ಕಲ್ಯಾಣ ಮತ್ತು ಹರಿಯಾಣದ ಜನರ ಪ್ರಗತಿಗಾಗಿ ಸಂಸತ್ತಿನಲ್ಲಿ ಯಾವಾಗಲೂ ಧ್ವನಿ ಎತ್ತಿದವರು. ಅವರ ಅಗಲಿಕೆ ರಾಜಕೀಯಕ್ಕೆ ತುಂಬಲಾರದ ನಷ್ಟ. ದೇವರು ಅಗಲಿದ ಆತ್ಮಕ್ಕೆ ಸ್ಥಾನ ನೀಡಲಿ ಮತ್ತು ಈ ಕಷ್ಟದ ಸಮಯದಲ್ಲಿ ಕುಟುಂಬಕ್ಕೆ ಶಕ್ತಿಯನ್ನು ನೀಡಲಿ ಎಂದು ಟ್ವೀಟ್​ ಮಾಡಿ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ:ಪೆಟ್ರೋಲ್​ ಬಂಕ್​ ಮಾಲೀಕನಿಗೆ 15 ಬಾರಿ ಇರಿದು ಕೊಂದು, ಹಣ ದರೋಡೆ; ಅರ್ಧಗಂಟೆಯಲ್ಲಿ ಆರೋಪಿಗಳು ಸೆರೆ

ABOUT THE AUTHOR

...view details