ಕರ್ನಾಟಕ

karnataka

ETV Bharat / bharat

ಮೋರ್ಬಿ ಸೇತುವೆ ದುರಂತದಲ್ಲಿ 12 ಸಂಬಂಧಿಕರನ್ನು ಕಳೆದುಕೊಂಡ ಬಿಜೆಪಿ ಸಂಸದ

ಭಾನುವಾರ ಸಂಜೆ ಗುಜರಾತ್‌ನ ಮೊರ್ಬಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಇದುವರೆಗೆ 180 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎನ್ನಲಾಗ್ತಿದೆ. ಆದರೆ ಜಿಲ್ಲಾಡಳಿತ ಪ್ರಕಾರ 141 ಜನ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಅಷ್ಟೇ ಅಲ್ಲ ಮಚ್ಚು ನದಿಯಲ್ಲಿ ನಡೆದ ಈ ಹೃದಯ ವಿದ್ರಾವಕ ದುರಂತದಲ್ಲಿ ಬಿಜೆಪಿ ಸಂಸದ ಮೋಹನ್ ಭಾಯ್ ಕುಂದರಿಯಾ ಅವರು ತಮ್ಮ 12 ಸಂಬಂಧಿಕರನ್ನು ಕಳೆದುಕೊಂಡಿದ್ದಾರೆ.

Morbi Bridge Collapse  bjp mp mohanbhai kundaria relatives death  morbi bridge collapse tragedy  kundaria relatives death in morbi bridge collapse  ಮೊರ್ಬಿಯಲ್ಲಿ ಸಂಭವಿಸಿದ ಭೀಕರ ಅಪಘಾತ  ಜೆಪಿ ಸಂಸದ ಮೋಹನ್ ಭಾಯ್ ಕುಂದರಿಯಾ  ಮೊರ್ಬಿ ಕೇಬಲ್​ ಸೇತುವೆ ಕುಸಿದು ಬಿದ್ದ ದುರಂತ  ಮಚ್ಚು ನದಿಯಲ್ಲಿ ನಡೆದ ಈ ಹೃದಯ ವಿದ್ರಾವಕ ದುರಂತ  ಮೊರ್ಬಿ ಸೇತುವೆ ದುರಂತ  ಸೈಮನ್​ ವಾಂಗ್​ ಸಂತಾಪ  ರಾಜ್‌ಕೋಟ್ ಬಿಜೆಪಿ ಸಂಸದ ಮೋಹನ್‌ಭಾಯ್ ಕುಂದರಿಯಾ  ಭಾರತದ ಸಿಂಗಾಪುರದ ಹೈ ಕಮಿಷನರ್ ಸೈಮನ್​ ವಾಂಗ್​ ಸಂತಾಪ
ಸೈಮನ್​ ವಾಂಗ್​ ಸಂತಾಪ

By

Published : Oct 31, 2022, 10:10 AM IST

Updated : Oct 31, 2022, 12:15 PM IST

ಮೊರ್ಬಿ, ಗುಜರಾತ್​: ನಿನ್ನೆ ಸಂಭವಿಸಿದ ಮೊರ್ಬಿ ಕೇಬಲ್​ ಸೇತುವೆ ಕುಸಿದು ಬಿದ್ದ ದುರಂತದಲ್ಲಿ ಇದುವರೆಗೆ 141ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ. ಆದರೆ ಸ್ಥಳೀಯರ ಪ್ರಕಾರ 180ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಅಷ್ಟೇ ಅಲ್ಲ ಈ ದುರಂತದಲ್ಲಿ ಬಿಜೆಪಿ ಸಂಸದ ತಮ್ಮ 12 ಜನ ಸಂಬಂಧಿಕರನ್ನು ಕಳೆದುಕೊಂಡಿದ್ದಾರೆ.

ಮೋರ್ಬಿ ಸೇತುವೆ ದುರಂತದ ವಿಡಿಯೋ

ಈ ದುರಂತದ ಬಗ್ಗೆ ಮಾತನಾಡಿದ ರಾಜ್‌ಕೋಟ್ ಬಿಜೆಪಿ ಸಂಸದ ಮೋಹನ್‌ಭಾಯ್ ಕುಂದರಿಯಾ, ಈ ಘಟನೆ ಅತ್ಯಂತ ದುಃಖಕರವಾಗಿದೆ. ನಾನು ನಿನ್ನೆ ಸಂಜೆಯಿಂದ ಇಲ್ಲಿದ್ದೇನೆ. ಇಲ್ಲಿಯವರೆಗೆ ನೂರಾರು ಜನರ ಶವಗಳು ಪತ್ತೆಯಾಗಿವೆ. ಈ ದುರಂತದಲ್ಲಿ ನಮ್ಮ ಸಂಬಂಧಿಕರು ಸಹ ಸಾವನ್ನಪ್ಪಿದ್ದಾರೆ. ನನ್ನ ಸೋದರ ಮಾವನ ನಾಲ್ಕು ಹೆಣ್ಮಕ್ಕಳು, 3 ಅಳಿಯಂದಿರು ಮತ್ತು 5 ಮಕ್ಕಳನ್ನು ಕಳೆದುಕೊಂಡಿದ್ದೇವೆ ಎಂದರು.

ಯಾರೇ ತಪ್ಪು ಮಾಡಿದರೂ ಕ್ರಮ ಕೈಗೊಳ್ಳಲಾಗುವುದು. ಯಾರನ್ನೂ ಬಿಡುವುದಿಲ್ಲ. ಈ ಅಪಘಾತದ ಸತ್ಯಾಸತ್ಯತೆ ಶೇ.100 ಹೊರಬರಲಿದೆ. ಪ್ರಧಾನಿ ಮೋದಿ ಕೂಡ ಈ ವಿಷಯದ ಮೇಲೆ ನಿರಂತರವಾಗಿ ಕಣ್ಣಿಟ್ಟಿದ್ದಾರೆ. ರಾತ್ರಿಯಿಡೀ ಫೋನ್‌ನಲ್ಲಿ ಈ ಬಗ್ಗೆ ಮಾಹಿತಿ ಪಡೆಯುತ್ತಿದ್ದರು ಎಂದು ಹೇಳಿದರು.

ಸಿಂಗಾಪುರದ ಹೈ ಕಮಿಷನರ್ ಸಂತಾಪ: ಇನ್ನು ದುರಂತದಲ್ಲಿ ಮೃತಪಟ್ಟ ಜನರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಾರತದ ಸಿಂಗಾಪುರದ ಹೈ ಕಮಿಷನರ್ ಸೈಮನ್​ ವಾಂಗ್​ ಸಂತಾಪ ಸೂಚಿಸಿದ್ದಾರೆ. ಗುಜರಾತ್​ನ ಮೋರ್ಬಿಯಲ್ಲಿ ಕೇಬಲ್ ಸೇತುವೆಯ ಕುಸಿತದಿಂದ ಅನೇಕ ಜೀವಗಳನ್ನು ಕಳೆದುಕೊಂಡಿರುವುದು ತೀವ್ರ ದುಃಖವಾಗಿದೆ. ಮೃತರ ಕುಟುಂಬಕ್ಕೆ ನಮ್ಮ ಆಳವಾದ ಸಂತಾಪಗಳು ಮತ್ತು ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇವೆ. ನಮ್ಮ ಹೃದಯಗಳು ಗುಜ್ ಜನರೊಂದಿಗೆ ಇವೆ ಎಂದು ಸೈಮನ್ ವಾಂಗ್ ಹೇಳಿದ್ದಾರೆ.

ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಈ ರಕ್ಷಣಾ ಕಾರ್ಯಾಚರಣೆಕ್ಕೆ ಹೆಚ್ಚು ಸಹಾಯವಾಗುವ ದೃಷ್ಟಿಯಿಂದ ಡ್ರೋನ್‌ಗಳನ್ನು ಬಳಸಲಾಗುತ್ತಿದೆ.

ಓದಿ:ಮೋರ್ಬಿ ದುರಂತದಲ್ಲಿ 141ಕ್ಕೂ ಹೆಚ್ಚು ಜನರ ಸಾವು: ಸರ್ಕಾರಿ ಆಸ್ಪತ್ರೆಗಳ ರಜೆ ರದ್ದು, ಘಟನಾ ಸ್ಥಳಕ್ಕೆ ಮೋದಿ ಭೇಟಿ ಸಾಧ್ಯತೆ

Last Updated : Oct 31, 2022, 12:15 PM IST

ABOUT THE AUTHOR

...view details