ನವದೆಹಲಿ: ಕೇರಳದ ಕೆಲವು ಜಿಲ್ಲೆಗಳು ನಾವು 'ಸೌದಿ ಅರೇಬಿಯಾ'ದಲ್ಲಿ ಇರುವಂತೆ ಭಾಸವಾಗುತ್ತದೆ. ಇಲ್ಲಿನ ಅಲ್ಪಸಂಖ್ಯಾತ ಸಮುದಾಯದ ಜನರು ಧರಿಸುವ ಗುರುತರ 'ವಸ್ತ್ರ ಸಂಹಿತೆ'ಯು ದೇಶವಿರೋಧಿ ಆಲೋಚನೆಗಳನ್ನು ಹುಟ್ಟು ಹಾಕುತ್ತಿವೆ ಎಂದು ಬಿಜೆಪಿ ರಾಜ್ಯಸಭೆ ಸದಸ್ಯ ಕೆ.ಜೆ.ಅಲ್ಪೋನ್ಸ್ ಕಳವಳ ವ್ಯಕ್ತಪಡಿಸಿದ್ದಾರೆ.
ಕೇರಳದಲ್ಲಿ ದಿನೇ ದಿನೇ ಬೆಳೆಯುತ್ತಿರುವ ಮೂಲಭೂತವಾದದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಅವರು, ರಾಜ್ಯದಲ್ಲಿ ಕ್ಷಿಪ್ರಗತಿಯಲ್ಲಿ ಇಸ್ಲಾಂ ಮೂಲಭೂತವಾದದೆಡೆಗೆ ಸಾಗುತ್ತಿದೆ. ಇದು ನಿಜವಾಗಿಯೂ ಅತ್ಯಂತ ಬೇಸರದ ಸಂಗತಿ. ನೀವು ಕೇರಳದ ಕೆಲವು ಜಿಲ್ಲೆಗಳಿಗೆ ಭೇಟಿ ಕೊಟ್ಟರೆ ನಾವೇನು ಸೌದಿ ಅರೇಬಿಯಾದಲ್ಲಿದ್ದೇವೆಯೇ ಎಂಬಂತೆ ಅನುಭವವಾಗುತ್ತದೆ. ಜನರು ಧರಿಸುವ ವೇಷಭೂಷಣಗಳ ಬಗ್ಗೆ ನಾನು ಯಾವುದೇ ಆಕ್ಷೇಪ ಎತ್ತುವುದಿಲ್ಲ. ಆದರೆ, ಸಮಸ್ಯೆ ಬದಲಾದ ಮನೋಭಾವದಲ್ಲಿದೆ. ಇದರೊಂದಿಗೆ ದೇಶ ವಿರೋಧಿ ಆಲೋಚನೆಗಳು ಹುಟ್ಟಿಕೊಳ್ಳುತ್ತಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಕೇರಳದಲ್ಲಿ ಪಿಎಫ್‌ಐ ರ್ಯಾಲಿಯಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಧರ್ಮೀಯರ ವಿರುದ್ಧ ಕೋಮುವಾದಿ ಘೋಷಣೆ ಕೂಗಿರುವುದರ ಬಗ್ಗೆ ಕೇರಳ ಹೈಕೋರ್ಟ್ ಪೊಲೀಸರಿಗೆ ಸೂಕ್ತ ಕ್ರಮ ಜರುಗಿಸುವಂತೆ ಸೂಚನೆ ನೀಡಿರುವುದರ ಬಗ್ಗೆ ಮಾತನಾಡಿದ ಅವರು, ಇಂಥ ಸಂಘಟನೆಗಳ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಕೊನೆಗೂ ಹೈಕೋರ್ಟ್ ಸೂಚನೆ ನೀಡಿದೆ. ಇದಕ್ಕೆ ರ್ಯಾಲಿಯ ಆಯೋಜಕರೇ ಹೊಣೆಗಾರರು ಎಂದರು.
ಕೇರಳದಲ್ಲಿ ಕಮ್ಯೂನಿಸ್ಟ್ ಸರ್ಕಾರ ಅಥವಾ ಕಾಂಗ್ರೆಸ್ ಸರ್ಕಾರವು ಈ ಮೂಲಭೂತವಾದಿ ಮುಸ್ಲಿಂ ಸಮುದಾಯದ ಮತಗಳ ಮೇಲೆ ಅವಲಂಬಿತವಾಗಿವೆ ಎಂದು ಅಲ್ಪೋನ್ಸ್ ಹೇಳಿದರು. ಈ ಹಿಂದೆ ಕೇರಳ ಭಯೋತ್ಪಾದನೆಯ ಕೇಂದ್ರ ಬಿಂದುವಾಗುತ್ತಿದೆ ಎಂದು ಹೇಳಿದ್ದರು. ಕೇರಳದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗಾಗಿ ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆಗಳು ಯುವಕರನ್ನು ನೇಮಕಾತಿ ಮಾಡಿಕೊಳ್ಳುತ್ತಿವೆ ಎಂದು ಅಲ್ಪೋನ್ಸ್ ಎಚ್ಚರಿಸಿದ್ದಾರೆ.
ಇದನ್ನೂ ಓದಿ:'ಭಾರತ ನನ್ನದಾಗಲೀ, ಠಾಕ್ರೆ, ಮೋದಿ, ಶಾ ಅವರದ್ದೂ ಅಲ್ಲ, ಆದ್ರೆ ಇವರದ್ದು' ಎಂದ ಓವೈಸಿ