ನವದೆಹಲಿ: ಟೀಂ ಇಂಡಿಯಾ ಮಾಜಿ ಆರಂಭಿಕ ಬ್ಯಾಟ್ಸ್‌ಮನ್, ಬಿಜೆಪಿ ಸಂಸದ ಗೌತಮ್ ಗಂಭೀರ್ಗೆ ಇದೀಗ ಎರಡನೇ ಜೀವ ಬೆದರಿಕೆ ಕರೆ ಬಂದಿದೆ. ಐಸಿಸ್ ಕಾಶ್ಮೀರದಿಂದ ಈ ಕೊಲೆ ಬೆದರಿಕೆ ಬಂದಿದೆ ಎಂದು ದೆಹಲಿ ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.
ಗೌತಮ್ ಗಂಭೀರ್ ನಿವಾಸದ ಹೊರಗಿನ ಕೆಲ ದೃಶ್ಯಾವಳಿಗಳನ್ನು ಈ ಬೆದರಿಕೆ ವಿಡಿಯೋದಲ್ಲಿ ಲಗತ್ತಿಸಲಾಗಿದ್ದು,ಇ-ಮೇಲ್ ಮೂಲಕ ರವಾನೆ ಮಾಡಲಾಗಿದೆ.
ಇಂದು ಬೆಳಗ್ಗೆ ಕೂಡ ಇ-ಮೇಲ್ ಮೂಲಕ ಜೀವ ಬೆದರಿಕೆ ಪಡೆದುಕೊಂಡಿದ್ದ ಗೌತಮ್ ಗಂಭೀರ್ ಇದೇ ವಿಚಾರವಾಗಿ ದೆಹಲಿಯ ರಾಜೇಂದ್ರ ನಗರ ಪೊಲೀಸ್ ಠಾಣೆ ಹಾಗೂ ಜಿಲ್ಲಾ ಡಿಸಿಪಿ ಅವರಿಗೆ ದೂರು ನೀಡಿದ್ದರು. ಇದರ ಬೆನ್ನಲ್ಲೇ ಅವರ ಮನೆಗೆ ಬಿಗಿ ಪೊಲೀಸ್ ಭದ್ರತೆ ನೀಡಲಾಗಿದೆ.
ಇದನ್ನೂ ಓದಿ:ತೆರೆದ ಜೀಪ್ ಚಲಾಯಿಸಿ ತಾನಿನ್ನೂ ಗಟ್ಟಿಯಾಗಿದ್ದೇನೆ ಎಂಬ ಸಂದೇಶ ರವಾನಿಸಿದ ಲಾಲೂ
ಕಳೆದ ಕೆಲ ದಿನಗಳ ಹಿಂದೆ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಪಾಕ್ನ ಕರ್ತಾರ್ಪುರ್ಗೆ ಭೇಠಿ ನೀಡಿದ್ದ ವೇಳೆ ಇಮ್ರಾನ್ ಖಾನ್ ತಮ್ಮ ಅಣ್ಣ ಇದ್ದಂತೆ ಎಂಬ ಹೇಳಿಕೆ ನೀಡಿದ್ದರು. ಇದೇ ವಿಚಾರವನ್ನಿಟ್ಟುಕೊಂಡು ಗಂಭೀರ್ ಅವರ ಮೇಲೆ ವಾಗ್ದಾಳಿ ನಡೆಸಿದ್ದರು. ಜೊತೆಗೆ ನಿಮ್ಮ ಮಕ್ಕಳನ್ನು ಗಡಿ ಕಾಯುವುದಕ್ಕೆ ಕಳುಹಿಸಿಕೊಡಿ ಎಂದು ಹೇಳಿಕೆ ನೀಡಿದ್ದರು.