ಕರ್ನಾಟಕ

karnataka

ETV Bharat / bharat

ತಲೆಗೆ ಗನ್​ಯಿಟ್ಟು ದರೋಡೆ, ಹಲ್ಲೆ ಆರೋಪ.. ಬಿಜೆಪಿ ಎಂಎಲ್​ಎ ಪುತ್ರನ ವಿರುದ್ಧ ಎಫ್​ಐಆರ್​

ಬಿಜೆಪಿ ಎಂಎಲ್​ಎ ಮಗನೊಬ್ಬ ತನ್ನ ಸಹಚರರೊಂದಿಗೆ ಸೇರಿ ಸಾಮಾನ್ಯ ವ್ಯಕ್ತಿ ಮೇಲೆ ಹಲ್ಲೆ ಮಾಡಿ ದರೋಡೆ ಮಾಡಿರುವ ಆರೋಪ ಪ್ರಕರಣ ಉತ್ತರಪ್ರದೇಶದ ಅಯ್ಯೋಧ್ಯೆಯಲ್ಲಿ ನಡೆದಿದೆ.

BJP MLA son booked in robbery  BJP MLA son booked in assault case  FIR against Uttar Pradesh BJP MLA son  Uttar Pradesh crime news  ಬಿಜೆಪಿ ಶಾಸಕನ ಮಗನ ಮೇಲೆ ದರೋಡೆ ಪ್ರಕರಣ  ಬಿಜೆಪಿ ಶಾಸಕನ ಮಗನ ಮೇಲೆ ಹಲ್ಲೆ ಪ್ರಕರಣ  ಉತ್ತರಪ್ರದೇಶ ಬಿಜೆಪಿ ಎಂಎಲ್ಎ ಮಗನ ವಿರುದ್ಧ ಎಫ್​ಐಆರ್​ ದಾಖಲು  ಉತ್ತರಪ್ರದೇಶ ಅಪರಾಧ ಸುದ್ದಿ
ಬಿಜೆಪಿ ಶಾಸಕನ ಪುತ್ರನ ವಿರುದ್ಧ ಎಫ್​ಐಆರ್​ ದಾಖಲು

By

Published : Apr 7, 2022, 8:05 AM IST

ಅಯೋಧ್ಯೆ(ಉತ್ತರ ಪ್ರದೇಶ) :ಇಲ್ಲಿನ ಪೊಲೀಸರು ಬಿಜೆಪಿ ಶಾಸಕರ ಪುತ್ರನ ವಿರುದ್ಧ ದರೋಡೆ ಮತ್ತು ಹಲ್ಲೆ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ. ಜಿಲ್ಲೆಯ ಖಂಡಸಾ ಪೊಲೀಸ್ ಠಾಣೆ ವ್ಯಾಪ್ತಿಯ ರಾಮನಗರ ಗ್ರಾಮದ ನಿವಾಸಿ ಶ್ಯಾಮ್ ಬಹದ್ದೂರ್ ಸಿಂಗ್ ನೀಡಿದ ದೂರಿನ ಮೇರೆಗೆ ಫೈಜಾಬಾದ್‌ನ ಕೊತ್ವಾಲಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏನಿದು ಘಟನೆ: ಸೋಮವಾರ ತಡರಾತ್ರಿ ವಾಹನವೊಂದರಲ್ಲಿ ಬಂದ ನಾಲ್ವರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಕ್ರೂರವಾಗಿ ಥಳಿಸಿದ ಮೆಲೆ ನಾಲ್ವರಲ್ಲಿ ಒಬ್ಬರು ಪಾಯಿಂಟ್ ಬ್ಲಾಂಕ್ ರೇಂಜ್​ನಿಂದ ಪಿಸ್ತೂಲ್ ಗುರಿಯಿಟ್ಟು ಗುಂಡು ಹಾರಿಸುವುದಾಗಿ ಬೆದರಿಕೆ ಹಾಕಿದರು ಎಂದು ಶ್ಯಾಮ್ ಬಹದ್ದೂರ್ ಸಿಂಗ್ ಎಫ್​ಐಆರ್​ನಲ್ಲಿ ಉಲ್ಲೇಖಿಸಿದ್ದಾರೆ.

ಓದಿ:ನಿವೃತ್ತ ನ್ಯಾಯಮೂರ್ತಿ ಮನೆಯಲ್ಲಿ ಕಳ್ಳತನ.. ಅಲ್ಲೇ ಪಾರ್ಟಿ ಮಾಡಿದ ಖದೀಮರು!

ತಲೆಗೆ ಪಿಸ್ತೂಲ್​ ಗುರಿಯಿಟ್ಟು ಅವರು ನನ್ನ ಬಳಿಯಿದ್ದ ಒಂದು ಲಕ್ಷ ನಗದು ಹಾಗೂ ಕೆಲವು ದಾಖಲೆ ಪತ್ರಗಳಿದ್ದ ಬ್ಯಾಗ್ ಅನ್ನು ಕಸಿದುಕೊಂಡರು. ಈ ವೇಳೆ ಸಹಾಯಕ್ಕಾಗಿ ಕೂಗಿಕೊಂಡಾಗ ಅಲ್ಲಿದ್ದ ಜನರು ದೌಡಾಯಿಸಿದರು. ಜನ ಬರುತ್ತಿದ್ದಂತೆ ದರೋಡೆಕೋರರು ಪರಾರಿಯಾಗಿದರು. ಈ ವೇಳೆ ಆ ವಾಹನವನ್ನು ರುದೌಲಿ ಬಿಜೆಪಿ ಶಾಸಕ ರಾಮಚಂದ್ರ ಯಾದವ್ ಅವರ ಪುತ್ರ ಅಲೋಕ್ ಯಾದವ್ ಚಲಾಯಿಸುತ್ತಿದ್ದರು ಎಂದು ಎಫ್​ಐಆರ್​ನಲ್ಲಿ ಉಲ್ಲೇಖಿಸಿದ್ದಾರೆ.

ಈ ಎಲ್ಲ ದೃಶ್ಯಗಳು ಅಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಿಂಗ್ ಮತ್ತು ಅವರ ಕುಟುಂಬದ ವಿರುದ್ಧ ಯಾವುದೇ ದುರ್ಘಟನೆ ನಡೆದರೆ ಅದಕ್ಕೆ ರುದೌಲಿ ಶಾಸಕ ರಾಮಚಂದ್ರ ಯಾದವ್ ಹೊಣೆಯಾಗುತ್ತಾರೆ ಎಂದು ಸಿಂಗ್​ ನೀಡಿರುವ ದೂರಿನಲ್ಲಿ ಉಲ್ಲೇಖವಾಗಿದೆ. ಮಂಗಳವಾರ ಸಂಜೆ ಎಫ್‌ಐಆರ್ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅಯೋಧ್ಯೆ ಎಸ್‌ಎಸ್‌ಪಿ ಶೈಲೇಶ್ ಪಾಂಡೆ ತಿಳಿಸಿದ್ದಾರೆ.

ABOUT THE AUTHOR

...view details