ರಾಯ್ಬರೇಲಿ(ಯು.ಪಿ):ಕೋವಿಡ್ ಸೋಂಕಿನಿಂದ ಬಳಲುತ್ತಿದ್ದಸಲೋನ್ ಕ್ಷೇತ್ರದ ಬಿಜೆಪಿ ಶಾಸಕ ದಲ್ ಬಹದ್ದೂರ್ ಕೋರಿ ಲಖನೌದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕೊರೊನಾಗೆ ಯುಪಿ ಬಿಜೆಪಿ ಶಾಸಕ ದಲ್ ಬಹದ್ದೂರ್ ಕೋರಿ ಬಲಿ - ಕೊರೊನಾಗೆ ಬಿಜೆಪಿ ಎಂಎಲ್ಎ ದಲ್ ಬಹದ್ದೂರ್ ಕೋರಿ ಬಲಿ
ಕಳೆದ ಕೆಲ ದಿನಗಳಿಂದ ಕೊರೊನಾದಿಂದ ಬಳಲುತ್ತಿದ್ದ ಬಿಜೆಪಿ ಶಾಸಕ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಕೊರೊನಾಗೆ ಬಿಜೆಪಿ ಶಾಸಕ ದಲ್ ಬಹದ್ದೂರ್ ಕೋರಿ ಬಲಿ
ಶಾಸಕರು ಪತ್ನಿ, ನಾಲ್ವರು ಮಕ್ಕಳು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಇಂದು ರಾಯ್ಬರೇಲಿಯಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದೆ.
1996ರಲ್ಲಿ ದಲ್ ಅವರಿಗೆ ಮೊದಲ ಬಾರಿಗೆ ಬಿಜೆಪಿ ಸ್ಲೋನ್ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಿತ್ತು. ರಾಜನಾಥ್ ಸಿಂಗ್ ಸರ್ಕಾರದಲ್ಲಿ ಸಚಿವರಾಗಿಯೂ ಇವರು ಕೆಲಸ ಮಾಡಿದ್ದರು. 2004ರಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷ ಸೇರಿದ್ದರು. ಬಳಿಕ 2014ರಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಭಂಗ ಅನುಭವಿಸುತ್ತಿದ್ದಂತೆ ಮತ್ತೆ ಬಿಜೆಪಿಗೆ ಮರಳಿದರು. 2017ರಲ್ಲಿ ಸ್ಲೋನ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಜಯ ಗಳಿಸಿದರು.